ಹುಬ್ಬಳ್ಳಿ : ಇಂದು ದುಬೈನಲ್ಲಿ ಭಾರತ-ನ್ಯೂಜಿಲ್ಯಾಂಡ್ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್ ನಡೆಯಲಿದ್ದು, ಹುಬ್ಬಳ್ಳಿಯಲ್ಲಿ ಕ್ರಿಕೇಟ್ ಅಭಿಮಾನಿಗಳ ಉತ್ಸಾಹ ಹೆಚ್ಚಿದ್ದು, ಭಾರತ ಗೆದ್ದೇ ಗೆಲುವುದು ಎಂಬ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಇಂದು ಕಿವಿಸ್ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ. ಯಾವುದೇ ಕಾರಣಕ್ಕೋ ಈ ಸಲ ವಿಶ್ವಕಪ್ ನಮ್ಮದೇ. ವಿರಾಟ್ ಕೊಹ್ಲಿ, ಹಾರ್ದಿಕ ಪಾಂಡೆ ಒಳ್ಳೆಯ ಫಾರ್ಮನಲ್ಲಿ ಆಡುತ್ತಾರೆ. ಇದರಲ್ಲಿ ಯಾವುದೇ ಸಂದೇಹ ಬೇಡಾ. ನಾವು ರೊಹೀತ್ ಶರ್ಮಾ ಮೇಲೆ ಭರವಸೆ ಇರಿಸಿಕೊಂಡಿದ್ದೇವೆ. ಇಂದಿನ ಫೈನಲ್ ಮ್ಯಾಚ್ ನಮ್ಮದೇ. ನಮ್ಮ ಅಟಗಾರರು ಉತ್ತಮ ಪ್ರದರ್ಶನ ಕೊಡಲಿದ್ದಾರೆ ಎಂದಿದ್ದಾರೆ.
Champion Trophy: ಇಂದು ಭಾರತ vs ನ್ಯೂಜಿಲೆಂಡ್ ಫೈನಲ್ ಕದನ: ಕಿವೀಸ್ ಮಣಿಸಿ ಟ್ರೋಫಿ ಎತ್ತಲಿದೆಯಾ ಟೀಮ್ ಇಂಡಿಯಾ!?
ಇನ್ನೂ ವಿಜಯಪುರದಲ್ಲಿ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಕ್ರೀಡಾಭಿಮಾನಿಗಳು ಭಾರತ ತಂಡಕ್ಕೆ ಶುಭಕೋರಿದ್ದಾರೆ. ಭಾರತ ತಂಡದ ಗೆಲುವು ನಿಶ್ಚಿತ ಎಂದು ಶುಭ ಹಾರೈಸಿದ್ದಾರೆ.