ದೆಹಲಿ: ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಗರಿಮೆಗೆ ಪಾತ್ರವಾಗಿದೆ. ವಿಶ್ವಸಂಸ್ಥೆಯ ಎಕಾನಾಮಿಕ್ಸ್ & ಸೋಷಿಯಲ್ ವೆಲ್ಫೇರ್ ರಿಪೋರ್ಟ್ ಪ್ರಕಾರ, ಈ ವರ್ಷ ದೇಶದ ಬೆಳವಣಿಗೆ ದರ 6.2 ಪರ್ಸೆಂಟ್ ಇರಲಿದೆ.
ಉತ್ಪತ್ತಿ, ತಯಾರಿ ವಲಯದಲ್ಲಿ ಭಾರತ (India) ವೇಗವಾಗಿ ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ದೇಶದ ಆರ್ಥಿಕತೆ 7.3ರಷ್ಟು ಬೆಳವಣಿಗೆ ಕಾಣಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ವಿಶೇಷ ಅಂದ್ರೆ ಮೋದಿ (Narendra Modi) ನಾಯಕತ್ವದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಸಿ ಸಾಧಿಸಿದೆ ಎಂದು ಚೀನಾ (China) ಪತ್ರಿಕೆಗಳು ಹೊಗಳಿವೆ.
ಮೋದಿ ಆಡಳಿತದಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿಸಿ ಸಾಧಿಸಿದೆ ಎಂದು ಚೀನಾ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ವಸಾಹತು ನೆರಳಿನಿಂದ ಹೊರಬಂದಿದೆ. ವಿದೇಶಾಂಗ ನೀತಿ ಚನ್ನಾಗಿದೆ. ಅಮೆರಿಕಾ, ರಷ್ಯಾ, ಜಪಾನ್ನಂತಹ ದೇಶಗಳ ಜೊತೆ ಭಾರತದ ವೈಖರಿ ಶ್ಲಾಘನಾರ್ಹ ಎಂದು ಚೀನಾದ ಪತ್ರಿಕೆ ಹೊಗಳಿದೆ. ಇನ್ನು ಹಿಂಡನ್ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಿಲೀಫ್ ನೀಡುತ್ತಲೇ ಗೌತಮ್ ಅದಾನಿ ದೇಶದ ನಂಬರ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.