ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ (ಸೆ.19) ಶುರುವಾದ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುವಂತ್ತಾಗಿದೆ. ಮೋಡ ಮುಚ್ಚಿದ ವಾತಾವರಣ ಕಾರಣ ಬಾಂಗ್ಲಾ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಭಾರತ ತಂಡ ಚೆನ್ನೈ ಟೆಸ್ಟ್ನ ಮೊದಲ ದಿನ ಭೋಜನ ವಿರಾಮದ ಹೊತ್ತಿಗೆ 3 ವಿಕೆಟ್ ನಷ್ಟದಲ್ಲಿ 88 ರನ್ ಗಳಿಸಿದೆ. ಬಾಂಗ್ಲಾದೇಶ ತಂಡದ ಯುವ ವೇಗದ ಬೌಲರ್ ಹಸನ್ ಮಹ್ಮೂದ್ 3 ವಿಕೆಟ್ ಕಿತ್ತು ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು. ರೋಹಿತ್ ಶರ್ಮಾ (6), ಶುಭಮನ್ ಗಿಲ್ (0) ಮತ್ತು ವಿರಾಟ್ ಕೊಹ್ಲಿ (6) ಬ್ಯಾಟಿಂಗ್ಗೆ ಕಷ್ಟ ಎನಿಸಿದ್ದ ವಾತಾವರಣದಲ್ಲಿ ವಿಕೆಟ್ ಕೈಚೆಲ್ಲಿ ನಿರಾಶೆ ಮೂಡಿಸಿದರು. ಆದರೂ ರಿಷಭ್ ಪಂತ್ (33*) ಮತ್ತು ಯಸಸ್ವಿ ಜೈಸ್ವಾಲ್ (37*) ಅರ್ದಶತಕದ ಜೊತೆಯಾಟ ಕಟ್ಟಿ ಭಾರತ ತಂಡಕ್ಕೆ ಚೇತರಿಕೆ ತಂದಿದ್ದಾರೆ.
29ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾದ ಯಸಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ 4ನೇ ವಿಕೆಟ್ಗೆ 74 ಎಸೆತಗಳಲ್ಲಿ 51 ರನ್ಗಳ ಅಮೋಘ ಜೊತೆಯಾಟ ಕಟ್ಟಿ ಚೇತರಿಕೆ ತಂದರು.
ಆರಂಭಿಕ ಮೂರು ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ಎಡಗೈ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಆಸರೆಯಾಗಿ ನಿಂತಿದ್ದಾರೆ. ಭಾರತ ತಂಡ 16 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 59 ರನ್ ಗಳಿಸಿದೆ.