ಕೆಲವೇ ದಿನಗಳ ಅಂತರದಲ್ಲಿ ಮೆಟಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸರ್ವರ್ ಮತ್ತೆ ಡೌನ್ ಆಗಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ಜನರಿಗೆ ಈ ಸಮಸ್ಯೆ ಎದುರಾಗಿದ್ದು ಇದರಿಂದ ಜನತೆ ಕೆಲಸ ಹೊತ್ತು ಪರದಾಡುವಂತಾಗಿದೆ.
ಕೆಲವರನ್ನ ತಮ್ಮ ಪಾಸ್ ವರ್ಡ್’ಗಳನ್ನ ಬದಲಾಯಿಸಲು ಸಹ ಕೇಳಲಾಯಿತು. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳು ಮತ್ತು ಇತರ ಹಲವಾರು ಫ್ಲ್ಯಾಟ್ ಫಾರ್ಮ್ ಗಳು ಸ್ಥಗಿತಗೊಂಡ ಕೆಲವೇ ವಾರಗಳಲ್ಲಿ ಮತ್ತೆ ಮರುಕಳಿಸಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಎರಡೂ ಮೆಟಾ ಅಪ್ಲಿಕೇಶನ್ಗಳಲ್ಲಿ ಕ್ರ್ಯಾಶ್ಗಳು ಮತ್ತು ಲಾಗಿನ್ ಸಮಸ್ಯೆಗಳನ್ನು ಅನುಭವಿಸುವ ಬಗ್ಗೆ ತಮ್ಮ ಹತಾಶೆಯನ್ನ ವ್ಯಕ್ತಪಡಿಸಲು ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ ಕಡೆಗೆ ತಿರುಗಿದರು. ಹೆಚ್ಚುವರಿಯಾಗಿ, ಮೆಸೆಂಜರ್ ಅಪ್ಲಿಕೇಶನ್ ಬಳಸುವಾಗ ಕೆಲವು ಬಳಕೆದಾರರು ತೊಂದರೆಗಳನ್ನು ಎದುರಿಸಿದ್ದಾರೆ.