ಗದಗ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೇಶ್ಯಾದ್ಯಂತ 40ಸ್ಥಾನ ಗೆಲ್ಲುವುದು ಕಷ್ಟವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ” ಭಾರತ ಬದಲಾಗುತ್ತಿದೆ. ಬೇರೆ ದೇಶಗಳಿಗೆ ಪೈಪೋಟಿ ಕೊಟ್ಟು ಬೆಳೆಯುತ್ತಿದೆ.
ಕೇವಲ ರಸ್ತೆ, ನೀರು ಕೊಡುವುದಷ್ಟೆ ಅಲ್ಲ. ಮಾಧ್ಯಮ, ಮೊಬೈಲ್ ಮೂಲಕ ಪ್ರತಿಯೊಬ್ಬರ ಕೈಯಲ್ಲಿ ಮಾಹಿತಿ ದೊರೆಯುವುದರಿಂದ ಜಗತ್ತಿನ ಎಲ್ಲ ಮಾಹಿತಿ ದೊರೆಯುವಂತಾಗಿದೆ. ಎಲ್ಲರ ಕೈಗೆ ಮಾಹಿತಿ ತಂತ್ರಜ್ಞಾನ ನೀಡಿದ್ದು ಪ್ರಧಾನಿ ನರೆಂದ್ರ ಮೋದಿಯವರು” ಎಂದರು.” ಕಾಂಗ್ರೆಸ್ನವರು ಗರಿಬಿ ಹಠಾವೊ ಅಂತ ಹೇಳಿದರು. ಆದರೆ, ಇದುವರೆಗೂ ಬಡತನ ನಿರ್ಮೂಲನೆ ಆಗಲಿಲ್ಲ.
ಪತ್ನಿ ತನ್ನ ಮಾಜಿ ಪತಿಗೆ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ನೀಡಬೇಕು: ಹೈಕೋರ್ಟ್ ಆದೇಶ
ಕಳೆದ ಹತ್ತು ವರ್ಷದಲ್ಲಿ ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. ರಾಜ್ಯದಲ್ಲಿ 36 ಲಕ್ಷ ಜನರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ದೊರೆತಿದೆ. 58 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ದೊರೆತಿದೆ.12 ಲಕ್ಷ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಇದೆಲ್ಲವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ಬು ಮೋದಿಯವರು ಮಾಡಿದ್ದಾರೆ. ಮೋದಿಯವರು ಅಕ್ಕಿ ಕೊಡುತ್ತಿದ್ದಾರೆ. ಇವರು ತಮ್ಮದೇ ಭಾಗ್ಯ ಅಂತ ಹೇಳಿಕೊಳ್ಳುತ್ತಿದ್ದಾರೆ ” ಎಂದರು.