ವಾಷಿಂಗ್ಟನ್:- ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಅಮೆರಿಕದ ಆಮದುಗಳ ಮೇಲೆ ಭಾರೀ ಸುಂಕ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ. ಭಾರತ ನಮ್ಮ ಮೇಲೆ ಭಾರೀ ಸುಂಕ ವಿಧಿಸುತ್ತಿದೆ. ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ, ಅಂದಹಾಗೆ, ಅವರು ಸುಂಕ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 14ರಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!
ಈ ಬಗ್ಗೆ ಮಾತನಾಡಿದ ಟ್ರಂಪ್, ಅಮೆರಿಕದ ಆಮದುಗಳ ಮೇಲೆ ‘ಭಾರಿ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ. ಭಾರತ ನಮ್ಮ ಮೇಲೆ ಭಾರಿ ಸುಂಕ ವಿಧಿಸುತಿತ್ತು. ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿರಲಿಲ್ಲ. ಇದೀಗ ಅವರು ಸುಂಕ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ. ಈಗ ಅವರು ತಮ್ಮ ಸುಂಕವನ್ನು ಕಡಿಮೆ ಮಾಡಲು ಬಯಸುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಸುತ್ತ ಸುಂಕಗಳು ತಾತ್ಕಾಲಿಕ ಮತ್ತು ಸಣ್ಣವು. ಏಪ್ರಿಲ್ 2 ರಿಂದ ದೊಡ್ಡ ಬದಲಾವಣೆ ಎಂದು ಟ್ರಂಪ್ ತಿಳಿಸಿದ್ದಾರೆ.