ಜಾಗತಿಕ ಮಹಾಶಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಭಾರತ ದೇಶ ಅರ್ಹವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಸಿದ್ದಾರೆ.
ಶತಕೋಟಿಗೂ ಅಧಿಕ ಜನಸಂಖ್ಯೆ, ವಿಶ್ವದ ಎಲ್ಲಾ ದೇಶಗಳಿಗಿಂತ ಆರ್ಥಿಕವಾಗಿ ಅತ್ಯಂತ ವೇಗದ ಬೆಳವಣಿಗೆ, ಪ್ರಾಚೀನ ಸಂಸ್ಕೃತಿ ಮತ್ತು ಮುಂದಿನ ಬೆಳವಣಿಗೆಗೆ ಉತ್ತಮ ನಿರೀಕ್ಷೆಗಳು ಇವುಗಳನ್ನೆಲ್ಲಾ ನೋಡಿದರೆ ಭಾರತವನ್ನು ನಿಸ್ಸಂದೇಹವಾಗಿ ಮಹಾಶಕ್ತಿಗಳ ಪಟ್ಟಿಗೆ ಸೇರಿಸಬೇಕು ಎಂದು ಪುಟಿನ್ ಹೇಳಿದರು
ಸೋಚಿಯಲ್ಲಿ ವಾಲ್ಡೈ ಚರ್ಚಾ ಕ್ಲಬ್ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಭಾರತ ಶ್ರೇಷ್ಠ ದೇಶ ಎಂದು ಕರೆದಿದ್ದು, ನಮ್ಮ ದ್ವಿಪಕ್ಷೀಯ ಸಂಬಂಧಗಳು ಎಲ್ಲಾ ದಿಕ್ಕುಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿವೆ ಎಂದರು..
ಅಧ್ಯಕ್ಷ ಪುಟಿನ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತದ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿದ್ದಾರೆ. ಅವರು ಎರಡು ಮಹಾನ್ ಶಕ್ತಿಗಳಾದ ಭಾರತ ಮತ್ತು ಚೀನಾದ ಬಗ್ಗೆ ವಿಶೇಷವಾಗಿ ಆರ್ಥಿಕ ಶಕ್ತಿ ಕೇಂದ್ರಗಳ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ಉಲ್ಲೇಖಗಳನ್ನು ಮಾಡುತ್ತಾರೆ. ಅವರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಷ್ಯಾದ ಮಾಜಿ ರಾಯಭಾರಿ ಪಿಎಸ್ ರಾಘವನ್ ಹೇಳಿದ್ದಾರೆ.