ಬಾಂಗ್ಲಾದೇಶ ವಿರುದ್ಧ ಕಾನ್ಪುರ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಅಂದ ಹಾಗೆ ಎರಡನೇ ಟೆಸ್ಟ್ ಪಂದ್ಯ ಮಳೆಯ ಕಾರಣ ಎರಡು ದಿನಗಳಲ್ಲಿ ಒಂದೇ ಒಂದು ಎಸೆತವನ್ನು ಆಡಲು ಸಾಧ್ಯವಾಗಿರಲಿಲ್ಲ. ಆದರೂ ಭಾರತ ತಂಡ ಕೊನೆಯ ಎರಡು ದಿನಗಳಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶನ ತೋರುವ ಮೂಲಕ ಕಾನ್ಪುರ್ ಟೆಸ್ಟ್ ಅನ್ನು ಗೆದ್ದುಕೊಂಡಿತ್ತು. ಆದರೆ, ಈ ಪಂದ್ಯದ ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಗಂಭೀರ ಆರೋಪ ಮಾಡಿದ್ದಾರೆ. ಭಾರತ ತಂಡ, ಇಂಗ್ಲೆಂಡ್ ಬ್ಯಾಝ್ಬಾನ್ ಶೈಲಿಯನ್ನು ಕಾಪಿ ಹೊಡೆದಿದೆ ಎಂದು ಆರೋಪಿಸಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ ತಾಯಿಗೆ ಪತ್ರ ಬರೆದ PM ಮೋದಿ: ಹೇಳಿದ್ದೇನು ಗೊತ್ತಾ!?
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ 8ರ ಸರಾಸರಿಯಲ್ಲಿ 34.4 ಓವರ್ಗಳಿಗೆ 9 ವಿಕೆಟ್ಗಳ ನಷ್ಟಕ್ಕೆ 285 ರನ್ಗಳನ್ನು ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ ಭಾರತ ತಂಡ 52 ರನ್ಗಳ ಮುನ್ನಡೆಯನ್ನು ಪಡೆದಿತ್ತು. ನಂತರ ಬಾಂಗ್ಲಾದೇಶ ತಂಡವನ್ನು ದ್ವಿತೀಯ ಇನಿಂಗ್ಸ್ನಲ್ಲಿ 146 ರನ್ಗಳಿಗೆ ಆಲ್ಔಟ್ ಮಾಡಿತ್ತು. ಆ ಮೂಲಕ ಭಾರತ ತಂಡಕ್ಕೆ ನಾಲ್ಕನೇ ಇನಿಂಗ್ಸ್ನಲ್ಲಿ ಗೆಲ್ಲಲು 95 ರನ್
ಇದು ಅಸಾಧಾರಣ ಪಂದ್ಯವೆಂದು ನಾನು ಕೂಡ ಹೇಳುತ್ತೇನೆ. 74.2 ಓವರ್ಗಳಿಗೆ ಬಾಂಗ್ಲಾದೇಶ ತಂಡ ಪ್ರಥಮ ಇನಿಂಗ್ಸ್ನಲ್ಲಿ ಆಲ್ಔಟ್ ಆಗಿತ್ತು. ನಂತರ ಭಾರತ ತಂಡದ ಬ್ಯಾಟಿಂಗ್ ಅದ್ಭುತವಾಗಿತ್ತು ಹಾಗೂ ಎಲ್ಲರೂ ಕೂಡ ಉತ್ತಮ ಪ್ರದರ್ಶನವನ್ನು ತೋರಿದ್ದರು. ಬ್ಯಾಝ್ಬಾಲರ್ಗಳ ರೀತಿ ಭಾರತ ತಂಡದ ಪ್ರದರ್ಶನವನ್ನು ನೋಡಲು ಖುಷಿಯಾಗುತ್ತಿತ್ತು. ಭಾರತ ಪ್ರಥಮ ಇನಿಂಗ್ಸ್ನಲ್ಲಿ 34.3 ಓವರ್ಗಳಿಗೆ 285 ರನ್ಗಳನ್ನು ಕಲೆ ಹಾಕಿತ್ತು. ಇಂಗ್ಲೆಂಡ್ ತಂಡದ ಬ್ಯಾಝ್ಬಾಲ್ ಶೈಲಿಯನ್ನು ಭಾರತ ಕಾಪಿ ಹೊಡೆದಿದೆ. ಇಂಗ್ಲೆಂಡ್ ತಂಡವನ್ನು ಭಾರತ ಕಾಪಿ ಹೊಡೆದಿರುವುದು ಭಯಾನಕವಾಗಿದೆ. ಕಾನೂನು ಏನೆಂದು ನನಗೆ ತಿಳಿದಿಲ್ಲ ಆದರೆ, ಇಂಗ್ಲೆಂಡ್ ಇದರ ವಿರುದ್ಧ ದೂರು ನೀಡಲಿದೆಯೇ?” ಎಂದು ಪಾಡ್ ಕಾಸ್ಟ್ವೊಂದರಲ್ಲಿ ಮೈಕಲ್ ವಾನ್ ದೂರಿದ್ದಾರೆ.