ಬೆಂಗಳೂರು: 11 ವರ್ಷಗಳ ನಂತರ ಕೊನೆಗೂ ಭಾರತ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.ಹೌದು. 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಆಯೋಜಿಸಿದ ಟ್ರೋಫಿಯನ್ನು ಭಾರತ ಗೆದ್ದುಕೊಂಡಿತ್ತು ಭಾರತ ಕ್ರಿಕೆಟ್ ತಂಡದ ಗೆಲುವನ್ನು ಸಿನಿಮಾ ಸೆಲೆಬ್ರಿಟಿಗಳು ಕೂಡ ಸಂಭ್ರಮಿಸಿದ್ದಾರೆ.
BREAKING.. ICSE, CBSE ಸೇರಿ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಎಕ್ಸ್ ಖಾತೆಯಲ್ಲಿ ʻʻರಾಹುಲ್ ದ್ರಾವಿಡ್ ಸರ್ ನೀವು ನಮ್ಮ ಹೆಮ್ಮೆ. , ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯಾವದ. ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್ಗೆ ವಿಶೇಷ ಧನ್ಯವಾದ’ ಎಂದಿದ್ದಾರೆ.
ನಿನ್ನೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಸಹ ತಮ್ಮ ಗೆಳೆಯರೊಟ್ಟಿಗೆ ಕೂತು ಬಿಂದಾಸ್ ಆಗಿ ನೋಡಿದ್ದಾರೆ ಸುದೀಪ್. ಚಕ್ರವರ್ತಿ ಚಂದ್ರಚೂಡ್, ವಿನಯ್ ಗೌಡ ಇನ್ನೂ ಕೆಲವು ಆತ್ಮೀಯ ಗೆಳೆಯರ ಜೊತೆಗೆ ಸುದೀಪ್ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ಗೆದ್ದ ಬಳಿಕ ಗೆಳೆಯರೊಟ್ಟಿಗೆ ಇಂಡಿಯಾ ಇಂಡಿಯಾ ಎಂದು ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)