ಕಾನ್ಪುರದಲ್ಲಿ ಭಾರೀ ಮಳೆ ಹಿನ್ನೆಲೆ, ಭಾರತ ಹಾಗೂ ಭಾರತ ದೇಶ ನಡುವಿನ ಟಾಸ್ ವಿಳಂಬವಾಗಲಿದೆ. ಟಾಸ್ ವಿಳಂಬವಾಗಲಿದೆ.
ವಾಹನ ಸವಾರರೇ ಇಲ್ಲಿ ಕೇಳಿ: ಒಂದು ತಿಂಗಳು ಈ ರಸ್ತೆಗಳು ಸಂಚಾರ ಬಂದ್, ಎಲ್ಲೆಲ್ಲಿ ಗೊತ್ತಾ!?
ಪಂದ್ಯಕ್ಕೂ ಮುನ್ನ ಮಳೆ
ಸುಮಾರು 1000 ದಿನಗಳ ನಂತರ ಕಾನ್ಪುರದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಕೊನೆಯದಾಗಿ 2021ರಲ್ಲಿ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತ್ತು. ಅದರ ನಂತರ ಇದೀಗ ತಂಡ, ಬಾಂಗ್ಲಾದೇಶವನ್ನು ಎದುರಿಸಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪಂದ್ಯಕ್ಕೆ ಒಂದು ದಿನ ಮೊದಲು ಮಳೆಯಿಂದಾಗಿ, ಆಟಗಾರರು ಹೆಚ್ಚು ಸಮಯ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಇತ್ತ ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಆಟ ವಿಳಂಬವಾಗಲಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ ಮೊದಲ ದಿನ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಿನವಿಡೀ ದಟ್ಟವಾದ ಮೋಡ ಕವಿದ ವಾತಾವರಣ ಇರಲಿದೆ. ಹೀಗಾಗಿ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ. ಅದರಲ್ಲೂ ಮೊದಲ ಸೆಷನ್ ನಂತರ ಶೇ.50ರಿಂದ 80ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ಎರಡನೇ ದಿನವೂ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ, ಆಟದ ಮೂರನೇ ದಿನ ಅಂದರೆ ಭಾನುವಾರ ಬೆಳಿಗ್ಗೆ ಮಳೆ ಬೀಳುವ ಸಾಧ್ಯತೆ ಇದ್ದು, ಆ ಬಳಿಕ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ. ಆದರೆ ಪಂದ್ಯದ ನಾಲ್ಕನೇ ಮತ್ತು ಐದನೇ ದಿನ ಹವಾಮಾನ ಸ್ಪಷ್ಟವಾಗಿರಲಿದ್ದು, ಪಂದ್ಯಕ್ಕೆ ಯಾವುದೇ ಅಡೆಚಣೆಗಳಿರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.