ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಬಾಗಲಕೋಟ ಜಿಲ್ಲೆ ಹಾಗೂ ರಾಜ್ಯ ಕಾರ್ಯಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಬಳ್ಳಾರಿ ಅವರಿಗೆ ಮನವಿಯನ್ನು ಸಲ್ಲಿಸಿದರು,
ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ , ಅಲ್ಮೇರಾ ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಮೊಬೈಲ್ ಫೋನ್ , ಸಿಯುಜಿ ಸಿಮ್ ಮತ್ತು ಡೇಟಾ ಗೂಗಲ್ ಕ್ರೋಮ್ ಬುಕ್ ಲ್ಯಾಪ್ ಟಾಪ್ ಪ್ರಿಂಟರ್ ಹಾಗೂ ಸ್ಕ್ಯಾನರ್ಗಳನ್ನ ಒದಗಿಸಿ ಕೊಡಿ ಎಂದು ಮನವಿ ಮಾಡದಿರು. ಇದ್ಯಾವುದನ್ನು ಸಹ ಕೊಡದೆ ಕೆಲಸ ಮಾಡುವ ಎಂದರೆ ಹೇಗೆ ಮಾಡಲು ಸಾಧ್ಯ ಕೂಡಲೆ ಸರ್ಕಾರ ಮನ ಗಂಡು ನಮಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ ಮತ್ತು ಮೊಬೈಲ್ ತಂತ್ರಾಂಶಗಳ ಕೆಲಸ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಎಂದು ಆಗ್ರಿಹಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ಅಧೀನದಲ್ಲಿ ಪ್ರಾಮಾಣಿಕ ಕೆಲಸವನ್ನು ನಿರ್ವಹಿಸುತ್ತಿದ್ದೇವೆ. ಬರಗಾಲ ಸಂದರ್ಭದಲ್ಲಿ ಮತ್ತು ಪ್ರವಾಹ ಬೆಳೆ ಸಮೀಕ್ಷೆ ಹೀಗೆ ಹಲವಾರು ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳನ್ನು ನಮ್ಮ ಅಧಿಕಾರಿಗಳು ಮಾಡುತ್ತಾರೆ. ಆದರೆ ಅವರ ಮೇಲೆ ನಿರಂತರ ಹಲ್ಲೆಗಳು ಕೂಡ ನಡೆಯುತ್ತಾ ಇವೆ. ಇದರ ಬಗ್ಗೆ ಸರ್ಕಾರ ಕೂಡಲೇ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳಿಗೂ ಭದ್ರತೆ ನೀಡಿ ಮತ್ತು ನಮಗೆ ಸುರಕ್ಷಿತವಾದ ಕಟ್ಟಡಗಳನ್ನ ನಿರ್ಮಿಸಿಕೊಡಬೇಕೆಂದು ಸರ್ಕಾರದ ಮುಂದೆ ಒತ್ತಾಯವಿಟ್ಟಿದ್ದಾರೆ.