ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೂರು ವಿಕೆಟ್ಗಳ ಜಯ ಸಾಧಿಸಿದೆ.
ಆರಂಭದಿಂದ ಅಂತ್ಯದವರೆಗೆ ಯಾವ ಹಂತದಲ್ಲೂ ಚೇತರಿಕೆ ಕಾಣದ ಭಾರತದ ಪರ ಕೇವಲ ಮೂವರು ಮಾತ್ರ 20ರ ಗಡಿ ದಾಟಿದರು. ಹಾರ್ದಿಕ್ ಪಾಂಡ್ಯ 45 ಎಸೆತಕ್ಕೆ 39ರನ್, ಅಕ್ಷರ್ ಪಟೇಲ್ 21ಕ್ಕೆ 27, ತಿಲಕ್ ವರ್ಮಾ 20 ಎಸೆತಕ್ಕೆ 20ರನ್ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಕೊಯೆಟ್ಜಿ, ಸಿಮಲೇನ್, ಮಾರ್ಕ್ರಮ್ ಮತ್ತು ಪೀಟರ್ ತಲಾ 1 ವಿಕೆಟ್ ಪಡೆದರು. ಎಲ್ಲ ಬೌಲರ್ಗಳ ಹೆಚ್ಚು ಕಡಿಮೆ 6ರ ಎಕಾನಮಿಯಲ್ಲೇ ಬೌಲಿಂಗ್ ಮಾಡಿ ಭಾರತವನ್ನ ಕಟ್ಟಿಹಾಕಿದರು.
ಬೆಂಗಳೂರಿಗರಿಗೆ ಬಿಗ್ ಶಾಕ್: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿಗೆ ಬಿಬಿಎಂಪಿ ಪ್ಲ್ಯಾನ್!?
ಆದರೆ ಈ ಮೊತ್ತವನ್ನ ದಕ್ಷಿಣ ಆಫ್ರಿಕಾ 19 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಕಷ್ಟಪಟ್ಟು ಗುರಿ ಮುಟ್ಟಿತು. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ 16 ಓವರ್ ಗಳಲ್ಲಿ 88/7 ಎಂದು ಸೋಲಿನ ಅಂಚಿನಲ್ಲಿತ್ತು. ಆದರೆ ನಂತರ ಟ್ರಿಸ್ಟಾನ್ ಸ್ಟಬ್ಸ್ (ಔಟಾಗದೆ 47; 41 ಎಸೆತ, 7 ಬೌಂಡರಿ) ಮತ್ತು ಜೆರಾಲ್ಡ್ ಕೊಯೆಟ್ಜಿ (ಔಟಾಗದೆ 19; 9 ಎಸೆತ, 2 ಬೌಂಡರಿ, 1 ಸಿಕ್ಸರ್) ವಿಧ್ವಂಸಕ ಬ್ಯಾಟಿಂಗ್ ಮೂಲಕ ಭಾರತದ ಕೈಯಲ್ಲಿದ್ದ ಪಂದ್ಯವನ್ನ ಕಸಿದುಕೊಂಡರು.
ಸುಲಭ ಸೋಲಾಗಬಹುದು ಎಂದು ಭಾವಿಸಿದ್ದ ಭಾರತ ತಂಡಕ್ಕೆ ವರುಣ್ ಚಕ್ರವರ್ತಿ ಐದು ವಿಕೆಟ್ ಪಡೆದು ಪಂದ್ಯವನ್ನು ಒಂದು ಹಂತದಲ್ಲಿ ಭಾರತದ ಕಡೆಗೆ ತಿರುಗಿಸಿದ್ದರು. ಆದರೆ ನಾಯಕ ಸೂರ್ಯಕುಮಾರ್ ಮಾಡಿದ ಯಡವಟ್ಟಿಗೆ ಟೀಮ್ ಇಂಡಿಯಾ ಸೋಲು ಕಾಣಬೇಕಾಯಿತು. ಡೆತ್ ಓವರ್ಗಳಲ್ಲಿ ಮೊನಚು ಕಳೆದುಕೊಂಡಿದ್ದ ವೇಗಿಗಳಿಗೆ ಚೆಂಡನ್ನ ನೀಡಿದ್ದು, ಸೋಲಿಗೆ ಪ್ರಮುಖ ಕಾರಣ ಎಂದು ಮಾಜಿ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ದಿನೇಶ್ ಕಾರ್ತಿಕ್ ವಿಶ್ಲೇಷಿಸಿದ್ದಾರೆ.
ಡೆತ್ ಓವರ್ಗಳಲ್ಲಿ ಕಳಪೆ ಬೌಲಿಂಗ್ ಮಾಡಿದ್ದು ಸೋಲಿಗೆ ಕಾರಣವಲ್ಲ. ಪಂದ್ಯ 19ನೇ ಓವರ್ ತಲುಪಲು ಬೌಲರ್ ಗಳ ಶಿಸ್ತಿನ ಬೌಲಿಂಗ್ ಕಾರಣ. ಆದರೆ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ. ಇನ್ನೂ 15-20 ರನ್ ಗಳಿಸಿದ್ದರೆ ಭಾರತಕ್ಕೆ ಗೆಲ್ಲುವ ಹೆಚ್ಚಿನ ಅವಕಾಶಗಳಿದ್ದವು ಎಂದು ಜಹೀರ್ ಅಭಿಪ್ರಾಯಪಟ್ಟಿದ್ದಾರೆ