ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಯಿತು. ಗಾಯಾದ ಸಮಸ್ಯೆ ಕಾರಣ ಶುಭಮನ್ ಗಿಲ್ ಈ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಪರಿಣಾಮ ಕಿಂಗ್ ಕೊಹ್ಲಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜವಾಬ್ದಾರಿ ಹೊರಬೇಕಾಯಿತು. ದುರದೃಷ್ಟವಶಾತ್ ಕೊಹ್ಲಿ ಎದುರಿಸಿದ 9 ಎಸೆತಗಳಲ್ಲಿ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿಯುತ್ತಾರಾ ಜೋ ರೂಟ್!
ಬೆನ್ನು ನೋವಿನ ಸಮಸ್ಯೆ ಎದುರಿಸಿರುವ ಶುಭಮನ್ ಗಿಲ್ ಮ್ಯಾಚ್ ಫಿಟ್ನೆಸ್ ಹೊಂದಿರದ ಕಾರಣ ಅವರನ್ನು ಟೀಮ್ ಇಂಡಿಯಾ ಪ್ಲೇಯಿಂಗ್ 11 ನಿಂದ ಕೈಬಿಡಲಾಯಿತು. ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ತಂದು ಹೆಚ್ಚುವರಿ ಸ್ಪಿನ್ನರ್ ಆಗಿ ಫಾಸ್ಟ್ ಬೌಲರ್ ಆಕಾಶ್ ದೀಪ್ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಮೋಡ ಮುಚ್ಚಿದ ವಾತಾವರಣದ ಅಡಿಯಲ್ಲಿ ಪಂದ್ಯದ ಎರಡನೇ ದಿನ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳನ್ನು ದಂಡಿಸುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಓಪನರ್ಸ್ ಕಣಕ್ಕಿಳಿದಿದ್ದರು. ಆದರೆ, ಮೋಡ ಮುಚ್ಚಿದ ವಾತಾವರಣದ ಅಡಿಯಲ್ಲಿ ನ್ಯೂಜಿಲೆಂಡ್ ತಂಡದ ಫಾಸ್ಟ್ ಬೌಲರ್ಗಳು ಅತ್ಯಂತ ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಭೋಜನ ವಿರಾಮಕ್ಕೂ ಮೊದಲೇ 34 ರನ್ಗಳಿಗೆ ಭಾರತದ 6 ವಿಕೆಟ್ ಉರುಳಿಸಿ ಆತಿಥೇಯರಿಗೆ ಆಘಾತ ನೀಡಿದರು.