ಕಿವೀಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ ಫೈನಲ್ನಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಗೆಲುವು ಸಾಧಿಸಿ ಹೊಸ ಅಧ್ಯಾಯ ಬರೆದಿದೆ.
‘ಕಿಸ್’ ಹುಡುಗಿ, ‘ಪುಷ್ಪ 2’ ಬೆಡಗಿ! ಶ್ರೀಲೀಲಾಗೆ ಸಿಕ್ತು ಮೆಗಾಸ್ಟಾರ್ ಕಡೆಯಿಂದ ಸ್ಪೆಷಲ್ ಗಿಫ್ಟ್!
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀರಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ಭಾರತೀಯ ಸ್ಪಿನ್ನರ್ಗಳ ದಾಳಿಗೆ ತತ್ತರಿಸಿತು. ಆದರೂ ಡೇರಿಲ್ ಮಿಚೆಲ್ (63) ಅರ್ಧಶತಕದ ನೆರವಿನಿಂದ ಭಾರತಕ್ಕೆ 252 ರನ್ಗಳ ಸವಾಲಿನ ಗುರಿ ನೀಡಿತು.
ನ್ಯೂಜಿಲೆಂಡ್ ಆರಂಭದಲ್ಲಿ ರಚಿನ್ ರವೀಂದ್ರ (37, 29 ಎಸೆತ) ಮತ್ತು ವಿಲ್ ಯಂಗ್ (15) ಜೋಡಿಯಿಂದ 57 ರನ್ಗಳ ಉತ್ತಮ ಆರಂಭ ಪಡೆದಿತ್ತು. ಆದರೆ, ವರುಣ್ ಚಕ್ರವರ್ತಿ ವಿಲ್ ಯಂಗ್ ಹಾಗೂ ಕುಲದೀಪ್ ಯಾದವ್ ರಚಿನ್ರನ್ನು ಬೌಲ್ಡ್ ಮಾಡಿ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ ಸ್ಪಿನ್ನರ್ಗಳ ದಾಳಿಗೆ ಉತ್ತರಿಸಲಾಗದೇ ತತ್ತರಿಸಿದರು. ಇಡೀ ಪಂದ್ಯದಲ್ಲಿ ಕಂಡು 2 ಅರ್ಧಶತಕದ ಜೊತೆಯಾಟ. ಆರಂಭಿಕ ಜೊತೆಯಾಟ ಹೊರೆತುಪಡಿಸಿದರೆ, 5ನೇ ವಿಕೆಟ್ಗೆ ಮಿಚೆಲ್- ಫಿಲಿಪ್ಸ್ 57 ರನ್ ಸೇರಿಸಿದರು.
ಡೇರಿಲ್ ಮಿಚೆಲ್ (63, 101 ಎಸೆತ, 3 ಬೌಂಡರಿ) ಮತ್ತು ಗ್ಲೆನ್ ಫಿಲಿಪ್ಸ್ (34, 52 ಎಸೆತ, 2 ಬೌಂಡರಿ, 1 ಸಿಕ್ಸರ್) 5ನೇ ವಿಕೆಟ್ಗೆ 57 ರನ್ ಸೇರಿಸಿ ತಂಡವನ್ನು ಆಧರಿಸಿದರು. ಆದರೆ, 46ನೇ ಓವರ್ನಲ್ಲಿ ಮೊಹಮ್ಮದ್ ಶಮಿ ಮಿಚೆಲ್ರನ್ನು ಔಟ್ ಮಾಡಿದರು. ಕೊನೆಯಲ್ಲಿ ಮೈಕಲ್ ಬ್ರೇಸ್ವೆಲ್ (53*, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಆಕ್ರಮಣಕಾರಿ ಬ್ಯಾಟಿಂಗ್ನಿಂದ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
250ರ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಕ್ಯಾಪ್ಟನ್ ರೋಹಿತ್ ಶರ್ಮಾ 83 ಬಾಲ್ ಗೆ 76 ರನ್, ಶುಭಮನ್ ಗಿಲ್ 50 ಬಾಲ್ ಗೆ 31 ರನ್ ಗಳಿಸಿ ಉತ್ತಮ ಆರಂಭ ತಂದುಕೊಟ್ಟರು. ಆದರೆ ಹೆಚ್ಚು ನಿರೀಕ್ಷೆ ಇಟ್ಟಿದ್ದ ವಿರಾಟ್ ಕೊಹ್ಲಿ ಅವರು, 2 ಬಾಲ್ ಗೆ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಬಳಿಕ ಶ್ರೇಯಸ್ ಅಯ್ಯರ್ 62 ಬಾಲ್ ಗೆ 48 ರನ್, ಅಕ್ಷರ್ ಪಟೇಲ್ 40 ಬಾಲ್ ಗೆ 29 ರನ್, ಕನ್ನಡಿಗ KL ರಾಹುಲ್ 33 ಬಾಲ್ ಗೆ 34 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 18 ಬಾಲ್ ಗೆ 18 ರನ್ ಗಳಿಸಿ ಔಟ್ ಆದರು. ಆ ಬಳಿಕ ಜಡೇಜಾ ಆಗಮಿಸಿ 6 ಬಾಲ್ ಗೆ 9 ರನ್ ಗಳಿಸಿ ಕಿವೀಸ್ ಕೊಟ್ಟ ಟಾರ್ಗೆಟ್ ಅನ್ನು 6 ಬಾಲ್ ಗಳು ಬಾಕಿ ಇರುವಂತೆಯಯೇ ಗೆದ್ದು ಬೀಗಿತು. ಈ ಮೂಲಕ ಕಿವೀಸ್ ಪಡೆಯನ್ನು ಮಣಿಸಿ ಅಜೇಯವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ 25 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.