ಬೆಂಗಳೂರು: ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊಲದ ಇನ್ನಿಂಗ್ಸ್ನಲ್ಲಿ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ವಿಲಿಯಂ ಓ’ರೂರ್ಕ್ (William O’Rourke), ಮ್ಯಾಟ್ ಹೆನ್ರಿ ವೇಗಿಗಳ ಆರ್ಭಟಕ್ಕೆ ನಲುಗಿದ ಟೀಂ ಇಂಡಿಯಾ (Team India) 46 ರನ್ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗ ಅನುಭವಿಸಿದೆ. ಅಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕೆಟ್ಟ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿದೆ.
IND Vs Nz Test: ಕಳೆದ 8 ವರ್ಷಗಳಲ್ಲಿ ಇದೇ ಮೊದಲ ಬಾರಿ ಡಕ್ ಔಟ್ ಆದ ವಿರಾಟ್ ಕೊಹ್ಲಿ!
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ (M Chinnaswamy Stadium) ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಕಿವೀಸ್ ವೇಗಿಗಳ ಅಬ್ಬರಕ್ಕೆ ಮಕಾಡೆ ಮಲಗಿತು. ನಿಧಾನಗತಿ ಬ್ಯಾಟಿಂಗ್ ಆರಂಭಿಸಿದ ಭಾರತ ಒಂದೊಂದು ಕದಿಯಲು ತಿಣುಕಾಡಿತು. ರೋಹಿತ್ (Rohit Sharma), ಕೊಹ್ಲಿ, ರಾಹುಲ್ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್ಗಳು ಬಹುಬೇಗನೆ ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಭಾರತ 46 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) 3ನೇ ಅತೀ ಕಡಿಮೆ ರನ್ ಗಳಿಸಿದ ಕೆಟ್ಟ ದಾಖಲೆಯನ್ನು ಹೆಗಲಿಗೇರಿಸಿಕೊಂಡಿತು.
ಟೀಂ ಇಂಡಿಯಾ ಕಳಪೆ ರನ್ ಗಳಿಸಿದ ಪಂದ್ಯಗಳು
* 36 ರನ್ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್ ಮೈದಾನ (2020)
* 42 ರನ್ – ಇಂಗ್ಲೆಂಡ್ ವಿರುದ್ಧ – ಲಾರ್ಡ್ಸ್ ಮೈದಾನ (1974
* 46 ರನ್ – ನ್ಯೂಜಿಲೆಂಡ್ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
* 58 ರನ್ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್(1952)
* 66 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್ ಮೈದಾನ (1996)