ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಹೇರಳ ರನ್ ಗಳಿಸಲು ಎಡವಿದ್ದು, ಅವರ ಬೆಂಬಲಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ನಿಂತಿದ್ದಾರೆ.
2019ರಿಂದ ಫ್ಯಾಬ್ 4 ರೇಸ್ ನಲ್ಲಿ ವಿರಾಟ್ ಕೊಹ್ಲಿ ಗ್ರಾಫ್ ಕುಸಿಯುತ್ತಾ ಸಾಗಿದೆ ಎಂದು ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕ್ಲಾಸ್ ಆಟಗಾರ ಕೇವಲ ಎರಡು ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಈಗ ಯಾವ ಸ್ಥಾನದಲ್ಲಿ ನಿಂತಿದ್ದಾರೆ ಎಂದರೆ ಪ್ರತಿ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಬೇಕು ಎಂಬ ಭಾವನೆ ಹೊಂದಿದ್ದಾರೆ ಎಂಬುದು ನನ್ನ ಭಾವನೆ. ಇದು ಎದುರಾಳಿ ತಂಡಕ್ಕೆ ಎಚ್ಚರಿಕೆ ಆಗಿದೆ. ಒಂದು ವೇಳೆ ವಿರಾಟ್ ಕೊಹ್ಲಿ ರನ್ ಕಲೆ ಹಾಕುವತ್ತ ಗಮನ ಹರಿಸಿದರೆ, ಆಗಿ ಅವರ ಬ್ಯಾಟ್ ನಿಂದ ಸಹಜವಾಗಿಯೇ ದೊಡ್ಡ ಮೊತ್ತ ಹರಿದು ಬರುತ್ತದೆ. ವಿರಾಟ್ ಆಸ್ಟ್ರೇಲಿಯಾ ವಿರುದ್ಧ ಅಂತಹ ಪ್ರದರ್ಶನ ತೋರುವುದು ತಂಡದ ದೃಷ್ಟಿಯಿಂದ ಮುಖ್ಯವಾಗಿದೆ. ಯಾವ ಸಮಯದಲ್ಲಿ ಎದುರಾಳಿ ಬೌಲರ್ ಗಳಿಗೆ ಕೌಂಟರ್ ಅಟ್ಯಾಕ್ ಕೊಡಬೇಕು ಎಂಬುದನ್ನು ಕೊಹ್ಲಿ ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ,” ನ್ಯೂಜಿಲೆಂಡ್ ಮಾಜಿ ಕೋಚ್ ಹೇಳಿದ್ದಾರೆ.