ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ನಡುವಿನ ಎರಡನೇ ಹಣಾಹಣಿ ಇದಾಗಿದೆ. ಇದಕ್ಕೂ ಮೊದಲು, ಈ ಎರಡೂ ತಂಡಗಳ ನಡುವೆ ಗುಂಪು ಹಂತದ ಕೊನೆಯ ಪಂದ್ಯವೂ ನಡೆದಿತ್ತು, ಅದರಲ್ಲಿ ಭಾರತ ಗೆದ್ದಿತ್ತು. ಆದಾಗ್ಯೂ, ಈ ಪಂದ್ಯದಲ್ಲಿ ಎರಡೂ ತಂಡಗಳ ಮೇಲೆ ಗೆಲ್ಲಲೇಬೇಕಾದ ಒತ್ತಡವಿದೆ. ಆದರೆ ಇದರ ಹೊರತಾಗಿಯೂ ನಾನಾ ಕಾರಣಗಳಿಂದ ಪಂದ್ಯ ರದ್ದಾದರೆ ಯಾವ ತಂಡ ಚಾಂಪಿಯನ್ ಆಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ 3 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಆದರೆ ನಾಕೌಟ್ ಪಂದ್ಯಗಳಿಗಾಗಿಯೇ ಐಸಿಸಿ ಕೆಲವು ವಿಭಿನ್ನ ನಿಯಮಗಳನ್ನು ರೂಪಿಸಿದೆ. ಈ ಬಾರಿ ಐಸಿಸಿ ಎರಡೂ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿತ್ತು. ಅದರಂತೆ ಫೈನಲ್ ಪಂದ್ಯಕ್ಕೂ ಮೀಸಲು ದಿನವಿದೆ. ಅಂದರೆ ಈ ಪಂದ್ಯ ಮಾರ್ಚ್ 9 ರಂದು ಪೂರ್ಣಗೊಳ್ಳದಿದ್ದರೆ, ಪಂದ್ಯವನ್ನು ಮಾರ್ಚ್ 10 ರಂದು ಸಹ ನಡೆಸಲಾಗುತ್ತದೆ. ಆದರೆ ನಿಗದಿತ ದಿನಾಂಕದಂದು ಆಟವನ್ನು ಮುಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಇದು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ಪ್ರಾರಂಭಿಸಲಾಗುತ್ತದ
ಮತ್ತೊಂದೆಡೆ, ಸೆಮಿಫೈನಲ್ ನಿಯಮವೆಂದರೆ ಪಂದ್ಯ ರದ್ದಾದರೆ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡ ಫೈನಲ್ಗೆ ಅರ್ಹತೆ ಪಡೆಯುವಂತೆ ನಿಮಯ ರೂಪಿಸಲಾಗಿತ್ತು. ಆದರೆ ಈ ನಿಯಮ ಫೈನಲ್ ಪಂದ್ಯಕ್ಕೆ ಅನ್ವಯವಾಗುವುದಿಲ್ಲ. ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಫೈನಲ್ ರದ್ದಾದರೆ, ಟ್ರೋಫಿಯನ್ನು ಹಂಚಿಕೊಳ್ಳಲಾಗುತ್ತದೆ. ಅಂದರೆ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಫಲಿತಾಂಶವನ್ನು ನಿರ್ಧರಿಸಲು ಡಕ್ವರ್ತ್ ಲೂಯಿಸ್ ನಿಯಮವನ್ನು ಸಹ ಬಳಸಬಹುದು, ಆದರೆ ಇದಕ್ಕಾಗಿ ಕನಿಷ್ಠ ಎರಡು ತಂಡಗಳೂ ತಲಾ 25 ಓವರ್ಗಳ ಆಟವನ್ನು ಆಡಿರುವುದು ಅಗತ್ಯ.