ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್ (Yashasvi Jaiswal), ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದ್ದ ಅಪರೂಪದ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ.
ಹಾಗೆ ರೋಹಿತ್ ಶರ್ಮಾ ಅವರ ಯುವ ಬ್ರಿಗೇಡ್ ಗಮನಾರ್ಹ ಗೆಲುವಿನ ಮೂಲಾಧಾರವಾಗಿತ್ತು. ಯಶಸ್ವಿ ಜೈಸ್ವಾಲ್ ಎರಡನೇ ಮತ್ತು ಮೂರನೇ ಟೆಸ್ಟ್ನಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ದ್ವಿಶತಕಗಳನ್ನು ಸಿಡಿಸಿದರು. ಸರಣಿಯುದ್ದಕ್ಕೂ ದಾಖಲೆಗಳ ಶಿಖರವನ್ನೇರಿದರು.
ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಟೆನ್ಷನ್ : ಪ್ರತಾಪ್ ಸಿಂಹ ಬದಲು ರಾಜಮನೆತನಕ್ಕೆ ಮೈಸೂರು ಫಿಕ್ಸಾ..!
ಜೈಸ್ವಾಲ್ ಬ್ಯಾಟ್ನಿಂದ ಅಬ್ಬರಿಸಿದರೆ, ರವಿಚಂದ್ರನ್ ಅಶ್ವಿನ್ ಚೆಂಡಿನಲ್ಲಿ ಮಾರಕವಾದರು. ಅವರು ತಮ್ಮ ಹೆಸರಿಗೆ 26 ವಿಕೆಟ್ಗಳೊಂದಿಗೆ ಪ್ರಮುಖ ವಿಕೆಟ್-ಟೇಕರ್ ಆಗಿ ಸರಣಿಯನ್ನು ಕೊನೆಗೊಳಿಸಿದರು. ಧರ್ಮಶಾಲಾ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಮುತ್ತಯ್ಯ ಮುರಳೀಧರನ್ (800) ಮತ್ತು ಶೇನ್ ವಾರ್ನ್ (708) ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದರು
ಹಿಟ್ಮ್ಯಾನ್ (Rohit Sharma) ಜೊತೆಗೆ ಕ್ರೀಸ್ ಆರಂಭಿಸಿದ ಯುವ ಬ್ಯಾಟರ್ ಯಶಸ್ವಿ ಜಸ್ವಾಲ್ ಮತ್ತೊಮ್ಮೆ ಸ್ಫೋಟಕ ಪ್ರದರ್ಶನ ನೀಡಿದರು. ಆಕರ್ಷಕ ಅರ್ಧಶತಕ ಗಳಿಸುವ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಹಾಗೂ ಸಚಿನ್ ತೆಂಡೂಲ್ಕರ್ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಹಾಗೂ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ 3ನೇ ಭಾರತೀಯ ಎಂಬ ವಿಶೇಷ ಸಾಧನೆಗೆ ಪಾತ್ರರಾದರು. ಸಚಿನ್ 25 ಸಿಕ್ಸರ್ ಸಿಡಿಸಿದ್ದರೆ, ಯಶಸ್ವಿ ಜೈಸ್ವಾಲ್ 26 ಸಿಕ್ಸರ್ ಸಿಡಿಸಿದ್ದಾರೆ.