ನಾಳೆ ವರ್ಲ್ಡ್ ಕಪ್ ಪೈನಲ್ ಪಂದ್ಯ ಹಿನ್ನಲೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಈ ಹಿನ್ನೆಲೆ, ಟೀಂ ಇಂಡಿಯಾಗೆ ಮಾಜಿ ಸಚಿವ ಬಿ. ಶ್ರೀರಾಮುಲು ಶುಭ ಕೋರಿದ್ದಾರೆ. ನಾನು ಕೂಡ ನಾಳೆಯ ಮ್ಯಾಚ್ ಗೆ ಕಾತುರದಿಂದ ಕಾಯುತ್ತಿದ್ದೇನೆ. ಮನೆಯ ಮದುವೆಯ ಜಂಜಾಟದಲ್ಲಿದ್ದರು ಮ್ಯಾಚ್ ನೋಡುತ್ತೇನೆ. ನಾಳೆ ಕೆಲಸ ಮುಗಿಸಿ ಪೂರ್ತಿ ಮ್ಯಾಚ್ ನೋಡುತ್ತೇನೆ.
ಅದು ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿಯೇ ಇದೆ. ಅಲ್ಲಿರುವುದರಿಂದ ಎಲ್ಲರೂ ಉತ್ಸುಕರಾಗಿದ್ದಾರೆ. ಕ್ರಿಕೆಟ್ ತಂಡದ ಆಟಗಾರರು ಕೂಡ ಉತ್ಸುಕರಾಗಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿರುವುದು ಒಂದು ಹೆಮ್ಮೆ. ಹಿಂದೆ ನಾವು ಕೂಡ ಕ್ರಿಕೆಟ್ ಆಡಿದ್ದೇವೆ. ಹೀಗಾಗಿ ನಮಗೂ ಕಾತುರ ಜಾಸ್ತಿ ಇದೆ. ಈಗಾಗಲೇ ಟೀ ಇಂಡಿಯಾ 10 ಪಂದ್ಯಗಳನ್ನ ಗೆದ್ದಿದೆ. ನಾಳೆಯೂ ಟೀಂ ಇಂಡಿಯಾ ಗೆದ್ದೆ ಗೆಲ್ಲುತ್ತೆ ಎಂಬ ವಿಶ್ವಾಸವಿದೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.