ಕೇರಳ: ಕೇರಳ ರಾಜ್ಯದಲ್ಲಿ ಹೆಪಟೈಟಿಸ್ ಎ ಸೋಂಕು ಆರ್ಭಟಿಸುತ್ತಿದೆ. ಕೇರಳ ರಾಜ್ಯದ ಆರೋಗ್ಯ ಇಲಾಖೆ ಪ್ರಕಾರ ಪ್ರಮುಖವಾಗಿ 4 ಜಿಲ್ಲೆಗಳಲ್ಲಿ ರೋಗ ವಿಪರೀತವಾಗಿ ಬಾಧಿಸುತ್ತಿದೆ. ಕೇರಳ ರಾಜ್ಯದ ಮಲಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್ ಹಾಗೂ ತ್ರಿಶ್ಯೂರ್ ಜಿಲ್ಲೆಗಳಲ್ಲಿ ಹೆಪಟೈಟಿಸ್ ಎ ಸೋಂಕಿನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.
ಕೇರಳ ರಾಜ್ಯಾದ್ಯಂತ ಈವರೆಗೆ 1,977 ಹೆಪಟೈಟಿಸ್ ಎ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 12 ರೋಗಿಗಳು ಸಾವನ್ನಪ್ಪಿದ್ದಾರೆ. 2024ರ ಜನವರಿಯಿಂದ ಈವರೆಗಿನ ಅಂಕಿ ಅಂಶ ಇದಾಗಿದೆ. ಹೆಪಟೈಟಿಸ್ ಎ ಸೋಂಕು ವೈರಾಣುವಿನಿಂದ ಹರಡುವ ಸೋಂಕು ರೋಗವಾಗಿದ್ದು, ಇದು ರೋಗಿಯ ಯಕೃತ್ (ಲಿವರ್) ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ತೀವ್ರ ಉರಿ ಹಾಗೂ ಊತ ಕಾಣಿಸಿಕೊಳ್ಳುತ್ತದೆ.
![Demo](https://ainlivenews.com/wp-content/uploads/2023/12/spoorthi-1.jpg)
ಕೇರಳ ರಾಜ್ಯದಲ್ಲಿ ಒಟ್ಟು 5,536 ಶಂಕಿತ ಹೆಪಟೈಟಿಸ್ ಎ ಸೋಂಕು ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಸದ್ಯ ಈ ಸೋಂಕಿನಿಂದಾಗಿ 12 ಮಂದಿ ಸಾವನ್ನಪ್ಪಿರೋದು ದೃಢಪಟ್ಟಿದ್ದು, ಇನ್ನೂ 15 ಮಂದಿಯ ಸಾವಿಗೆ ಹೆಪಟೈಟಿಸ್ ಎ ಸೋಂಕೇ ಕಾರಣ ಎಂಬ ಶಂಕೆಯೂ ಇದೆ. ಹೆಪಟೈಟಿಸ್ ಎ ಸೋಂಕು ಭಾರೀ ಪ್ರಮಾಣದ ಉರಿ ಹಾಗೂ ಊತಕ್ಕೆ ಕಾರಣವಾಗುತ್ತದೆ.
ಪ್ರಮುಖವಾಗಿ ಲಿವರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಸೋಂಕಿನ ಲಕ್ಷಣಗಳು ಹಲವು ತಿಂಗಳವರೆಗೆ ಕಾಡಬಹುದಾಗಿದೆ. ಅಚ್ಚರಿಯ ವಿಷಯವೆಂದರೆ, ಕೆಲವು ರೋಗಿಗಳಿಗೆ ಯಾವುದೇ ಚಿಕಿತ್ಸೆ ಇಲ್ಲದೆಯೂ ಈ ಸೋಂಕು ಗುಣಮುಖ ಆಗುವ ಸಾಧ್ಯತೆಗಳೂ ಇವೆ. ಈ ಸೋಂಕು ಬಾಯಿಯ ಮೂಲಕ ವ್ಯಕ್ತಿಯ ದೇಹ ಪ್ರವೇಶಿಸುತ್ತದೆ ಎನ್ನುತ್ತಾರೆ ತಜ್ಞರು.
![](https://ainlivenews.com/wp-content/uploads/2024/01/Ad-Banner-copy-scaled.jpg)