ಚಾಮರಾಜನಗರ: ಬಂಡೀಪುರ ಹುಲಿ ಯೋಜನೆಯ ಸಫಾರಿಯಲ್ಲಿ ಕಳೆದೊಂದು ವರ್ಷದಲ್ಲಿ ಪ್ರವಾಸಿಗರ ಏರಿಕೆ ಗಣನೀಯವಾಗಿ ಏರಿಕೆ ಕಂಡಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಯೋಜನೆಯಲ್ಲಿರುವ ಸಫಾರಿ ಪಾಯಿಂಟ್ ಒಂದೇ ವರ್ಷದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಕಂಡು ಆಶ್ಚರ್ಯ ಮೂಡಿಸಿದೆ. ಜನವರಿ 1 ರಿಂದ ಡಿಸೆಂಬರ್31 ವರಗೆ ಬಂಡೀಪುರ ಸಫಾರಿಗೆ 146500 ಜನರು ಭೇಟಿ. ಒಂದೇ ವರ್ಷಕ್ಕೆ 1 ಲಕ್ಷ 47 ಸಾವಿರ ಪ್ರವಾಸಿಗರಿಂದ ಬಂಡೀಪುರ ವೀಕ್ಷಣೆಯಾಗಿ ಆದಾಯ ಹೆಚ್ಚಿಸಿದೆ.
ನರೇಂದ್ರ ಮೋದಿ ಎಫೆಕ್ಟ್ ನಿಂದಾಗಿ ಬಂಡೀಪುರದಲ್ಲಿ ಸಫಾರಿಗೆ ಮುಗಿಬಿದ್ದ ಹೊರ ರಾಜ್ಯದ ಪ್ರವಾಸಿಗರು ದಿನೇದಿನೇ ಹೆಚ್ಚಾಗ್ತಾ ಇದಾರೆ. ಅದರಲ್ಲೂ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗ್ತಾ ಇದೆ. ಒಂದೇ ವರ್ಷದಲ್ಲಿ 10 ,ಕೋಟಿ 50 ಲಕ್ಷ ರೂಪಾಯಿ ಆದಾಯ ಗಳಿಕೆಯಾಗಿದ್ದು ಹಿಂದಿನ ವರ್ಷಕ್ಕೆ ಹೊಲಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾದಂತಾಗಿದೆ ಎಂದು ಬಂಡೀಪುರ ಸಿ.ಎಫ್.ಡಾ.ರಮೇಶ್ ಕುಮಾರ ಮಾಹಿತಿ ನೀಡಿದ್ದಾರೆ
ದೇಶದ ಪ್ರತಿಷ್ಠಿತ ಸಂರಕ್ಷಿತಾರಣ್ಯ.50 ವರ್ಷದ ಸಂಭ್ರಮಾಚರಣೆ ಹಿನ್ನಲೆ ದೇಶದ ಪ್ರಧಾನಿ ನಮೋ ಈ ಅರಣ್ಯದಲ್ಲಿ ಸಫಾರಿ ನಡೆಸಿ ಹೋಗಿದ್ದರು. ಅಲ್ಲಿಂದ ಬಂಡೀಪುರದ ಚಾರ್ಮ್ ಸಂಪೂರ್ಣ ಬದಲಾಗಿ ಹೋಗಿದೆ.ಸಫಾರಿಗೆ ಆಗಮಿಸುವರ ಸಂಖ್ಯೆಯೂ ಹೆಚ್ಚಿದ್ದು,ಆದಾಯ ಕೂಡ ಹಿಂದಿಗಿಂತಲೂ ಡಬಲ್ ಆಗ್ತಿದೆ.
ಬಂಡೀಪುರದಲ್ಲಿ ದೇಶದ ಪ್ರಧಾನಿ ಮೋದಿ ಒಂದೂವರೆ ತಾಸು ಸಫಾರಿ ನಡೆಸಿ ಹೋಗಿದ್ದರು.ಇದೀಗಾ ಅವರು ಸಫಾರಿ ನಡೆಸಿ ಹೋದ ಬಳಿಕ ಬಂಡೀಪುರದ ಚಿತ್ರಣವೇ ಕಂಪ್ಲೀಟ್ ಬದಲಾಗಿದೆ.ದೇಶದ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದಲೂ ವನ್ಯ ಪ್ರಾಣಿ ವೀಕ್ಷಣೆಗೆ ಹಾಗೂ ಬಂಡೀಪುರದ ಸೌಂದರ್ಯ ಕಣ್ತುಂಬಿಕೊಳ್ಳಲೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ