ಬೆಂಗಳೂರು:- ಮೆಟ್ರೋ ಹಳಿಗೆ ಜಿಗಿದು ಸೂಸೈಡ್ ಕೇಸ್ ಹೆಚ್ಚಳವಾಗಿದ್ದು, BMRCL PSD ಮೊರೆ ಹೋಗಿದೆ.
ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು. ಜೊತೆಗೆ ಜನದಟ್ಟಣೆ ಇರುವ ಸ್ಟೇಷನ್ಗಳಲ್ಲಿ ಬ್ಯಾರಿಕೇಡ್ ಆಳವಡಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೋರನ್ನ ತಡೆಯಲು ಆಗೋಲ್ಲ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಉದಾಹರಣೆಗಳೇ ಇಲ್ಲ. ಹೀಗಾಗಿ ಹೊಸ ಮಾರ್ಗಗಳಾದ ಗೊಟ್ಟಿಗೆರೆ ಯಿಂದ ನಾಗವಾರ ಸಿಲ್ಕ್ ಬೋರ್ಡ್ ಯಿಂದ ಅಂತರರಾಷ್ಟ್ರೀಯ ಏರ್ಪೋರ್ಟ್ ನಲ್ಲಿ ಪಿಎಸ್ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.
Rain News: ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಐದು ದಿನಗಳು ಮಳೆ ಅಲರ್ಟ್!
ಇನ್ನು ಹಳೆಯ ಮಾರ್ಗಕ್ಕೆ ಸೇಫ್ಟಿ ಡೋರ್ಸ್ ಹಾಕೋದಕ್ಕೆ ಚಿಂತನೆ ನಡೆದಿದೆ. ಈಗ ಇರುವ ಮೆಟ್ರೋ ಸ್ಟೇಷನ್ ಅನ್ನು ಪಿಎಸ್ಡಿ ಟೆಕ್ನಾಲಜಿ ಜೊತೆಗೆ ಹೊಂದಿಕೆ ಮಾಡಬೇಕು. ಇದು ತಾಂತ್ರಿಕ ಸವಾಲು, ಜೊತೆಗೆ ಒಂದು ನಿಲ್ದಾಣದಲ್ಲಿ ಪಿಎಸ್ ಡಿ ಆಳವಡಿಕೆ ಮಾಡಲು ಕನಿಷ್ಠ 10 ಕೋಟಿ ಬೇಕಾಗುತ್ತದೆ. ಜನರ ಸೇಫ್ಟಿ ದೃಷ್ಟಿಯಿಂದ ನಮ್ಮ ಮೆಟ್ರೋ ಈ ಎರಡು ಸವಾಲನ್ನ ಸ್ವೀಕರಿಸಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಈ ಕಾಮಗಾರಿ ಮಾಡಬೇಕಾಗಿದೆ.
ಇದನೆಲ್ಲ ಉನ್ನತ ಮಟ್ಟದಲ್ಲಿ ಸಭೆ ಮಾಡಲಾಗುತ್ತಿದೆ. ಪಿಎಸ್ಡಿ ಡೋರ್ ಅಳವಡಿಸಲು ಮುಂದಾಗಿರುವ ಮೆಟ್ರೋ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.