ಬೆಂಗಳೂರು: ರಾಜ್ಯದಲ್ಲಿ ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿನ ಸೇವಾದರವನ್ನು ಹೆಚ್ಚಿಸಲಾಗಿದ್ದು, ಈ ಮೂಲಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ದರ ಏರಿಕೆ ಬಿಸಿ ತಟ್ಟಿದೆ. ಉಚಿತ ಚಿಕಿತ್ಸೆ ಕೊಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಸೇವೆಗಳ ದರವನ್ನು ಶೇ10-ಶೇ20ರವರೆಗೂ ಏರಿಕೆ ಮಾಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಬಗ್ಗೆ ನೋಟಿಸ್ ಕೂಡ ಹಾಕಲಾಗಿದೆ.
ಯಾವ ಸೇವೆಯ ದರ ಹೆಚ್ಚಳ
ಒಪಿಡಿ ರಿಜಿಸ್ಟ್ರೇಷನ್ ಬುಕ್
ಹಿಂದಿನ ದರ 10 ರೂ.
ಪರಿಷ್ಕೃತ ದರ 20 ರೂ
ಹೆಚ್ಚಳ 10 ರೂ.
ಒಳರೋಗಿ ಅಡ್ಮಿಷನ್
ಹಿಂದಿನ ದರ : 25 ರೂ.
ಪರಿಷ್ಕೃತ ದರ : 50 ರೂ.
ಹೆಚ್ಚಳ: 25 ರೂ.
ರಕ್ತ ಪರೀಕ್ಷೆ
ಹಿಂದಿನ ದರ : 70 ರೂ.
ಪರಿಷ್ಕೃತ ದರ : 120 ರೂ.
ಹೆಚ್ಚಳ : 50 ರೂ.
ವಾರ್ಡ್ ಚಾರ್ಜ್ :
ಹಿಂದಿನ ದರ : 25ರೂ.
ಪರಿಷ್ಕೃತ ದರ : 50 ರೂ.
ಹೆಚ್ಚಳ : 25 ರೂ.
ಆಸ್ಪತ್ರೆ ತ್ಯಾಜ್ಯ ನಿರ್ವಹಣೆ
ಹಿಂದಿನ ದರ : 10 ರೂ.
ಪರಿಷ್ಕೃತ ದರ: 50 ರೂ.
ಹೆಚ್ಚಳ : 40 ರೂ.