ಬೀದರ್ : ಬಸವಕಲ್ಯಾಣದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಕರೆಯುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ನೂತನ ಅನುಭವ ಮಂಟಪ ನಿರ್ಮಾಣ ಪೂರ್ಣಗೊಂಡ ಬಳಿಕ ಸಂಪುಟ ಸಭೆ ಕರೆದು ಈ ಭಾಗದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಚರ್ಚಿಸುವಂತೆ ಸಿಎಂ ಗಮನಕ್ಕೆ ತಂದಿರುವೆ ಎಂದರು.
ಹಂಪಿ ಉತ್ಸವಕ್ಕೆ ಮುಕ್ತಿಧಾಮ, ಇಂದಿರಾನಗರದ ವಾಸಿಗಳಿಗೆ ವಿವಿಐಪಿ ಪಾಸ್ ವಿತರಣೆ
ಕಲ್ಯಾಣದಲ್ಲಿ 650 ಕೋಟಿ ರೂ. ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣ ಪ್ರಗತಿಯಲ್ಲಿದೆ. ಇದಕ್ಕಾಗಿ ಪ್ರಸಕ್ತ ವರ್ಷದೊಳಗೆ 20 ಕೋಟಿ ರೂ. ಬಿಡುಗಡೆ. 250 ಕೋಟಿ ರೂ. ಇನ್ನೊಂದು ಕಂತಿನ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಬಸವಕಲ್ಯಾಣದಲ್ಲಿ ನಿರ್ಮಾಣವಾಗುವ ನೂತನ ಅನುಭವ ಮಂಟಪ ಮುಂದಿನ ವರ್ಷ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.