ಭಾರತ ಮತ್ತು ಕೋರಿಯಾ ನಡುವಿನ ಹೊಸ ಆರ್ಥಿಕ ಸಂಬಂಧಗಳ ವೃದ್ಧಿಸುವ ನಿಟ್ಟಿನಲ್ಲಿ ಬೆಂಗಳೂರಿನ ನೂತನವಾಗಿ ಜಿಯೊಂಗಿ ಬಿಸಿನೆಸ್ ಸೆಂಟರ್ ನ್ನು ಕರ್ನಾಟಕ ಸರ್ಕಾರದ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಕಾಂಗ್ ಸುಂಗ್-ಚಿಯೋನ್ ರವರು ಉದ್ಘಾಟಿಸಿದರು.. ಕೇಂದ್ರವು ಮುಂದಿನ ದಿನಗಳಲ್ಲಿ ಆರ್ಥಿಕ ಸಂಬಂಧಗಳು, ವ್ಯಾಪಾರ, ಹೂಡಿಕೆ ಮತ್ತು ಮಾನವ ಸಂಪನ್ಮೂಲ ವಿನಿಮಯವನ್ನು ಜಾಗತಿಕವಾಗಿ ಸುಗಮಗೊಳಿಸಲಿವೆ..
ಭಾರತದ ಅತಿದೊಡ್ಡ ಐಟಿ ಕ್ಲಸ್ಟರ್ ಎನಿಸಿಕೊಂಡಿರುವ ಬೆಂಗಳೂರು ಭರವಸೆಯ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ.. GBC ಬೆಂಗಳೂರು ದಕ್ಷಿಣ ಭಾರತಕ್ಕೆ ವಿಸ್ತರಿಸುವ ಕಂಪನಿಗಳಿಗೆ ಗೇಟ್ವೇ ಆಗಿದ್ದು, ಹೊಸ ವ್ಯಾಪಾರ ಅವಕಾಶಗಳ ಮೇಲೆ ಕೇಂದ್ರೀಕರಿಸುತ್ತದೆ, ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹತೋಟಿಗೆ ಮತ್ತು ಕೈಗಾರಿಕೆಗಳ ನಡುವಿನ ಸಹಯೋಗವನ್ನು ಉತ್ತೇಜಿಸುತ್ತದೆ. ಉದ್ಯಮ, ತಂತ್ರಜ್ಞಾನ, ಸ್ಟಾರ್ಟ್ಅಪ್ಗಳು ಮತ್ತು ‘ಮೇಕ್ ಇನ್ ಇಂಡಿಯಾ’ ಗಾಗಿ ಕೊರಿಯನ್ SME ಗಳೊಂದಿಗಿನ ಪಾಲುದಾರಿಕೆಯು ಹೊಸ ಸಾಧ್ಯತೆಗೆ ಅವಕಾಶ ಮಾಡಿಕೊಡಲಿದೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ನಂತರ ಆಯುಕ್ತೆ ಗುಂಜನ್ ಕೃಷ್ಣ ರವರು ಮಾತನಾಡಿ ಈ ಬೆಳವಣಿಗೆಯು ಜಿಯೋಂಗಿ ಮತ್ತು ಕರ್ನಾಟಕದ ನಡುವಿನ ವ್ಯವಹಾರಗಳಿಗೆ ಹೊಸ ಸಾಧ್ಯತೆಯಾಗಲಿದೆ. ಕೋರಿಯನ್ ತಂತ್ರಜ್ಞಾನ, ಉತ್ಪನ್ನ ಮತ್ತು ವ್ಯಾಪಾರ ಹೋಡಿಕೆಗಳಿಗೆ ಜಿಬಿಸಿ ಅವಕಾಶ ಒದಗಿಸಿ ಕೊಡಲಿದೆ. ಈ ಕಾರ್ಯಕ್ರಮದಲ್ಲಿ ಎರಡು ದೇಶಗಳ ಮುಖ್ಯ ಅತಿಥಿಗಳ ಪಾಲ್ಗೊಳ್ಳುವಿಕೆಯು ವ್ಯಾಪಾರ ವೃದ್ಧಿ, ಆವಿಷ್ಕಾರ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದರು.