ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆಗೊಂಡ ಬಿಎಪಿಎಸ್ ಹಿಂದೂ ದೇವಾಲಯ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಲಿದೆ ಎಂದರು.
ಮಂದಿರ ಉದ್ಘಾಟಿಸಿದ ಮಾತನಾಡಿದ ಪ್ರಧಾನಿ ಮೋದಿ, ಯುಎಇ ಒಂದು ಸುವರ್ಣ ಅಧ್ಯಾಯವನ್ನು ಬರೆದಿದೆ. ಹಿಂದೂ ದೇವಾಲಯ ಉದ್ಘಾಟನೆ ಹಿಂದೆ ಹಲವು ವರ್ಷಗಳ ಶ್ರಮವಿದೆ ಮತ್ತು ಅನೇಕರ ಕನಸುಗಳು ದೇವಾಲಯದೊಂದಿಗೆ ಸಂಪರ್ಕ ಹೊಂದಿದೆ. ಸ್ವಾಮಿನಾರಾಯಣ ಅವರ ಆಶೀರ್ವಾದವೂ ಇದ್ದು, ಇದು ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ದೇವಾಲಯ ನಿರ್ಮಾಣದಲ್ಲಿ ಯುಎಇ ಸರ್ಕಾರದ ಪಾತ್ರ ಶ್ಲಾಘನೀಯವಾಗಿದೆ ಎಂದರು.
ಇಲ್ಲಿಯವರೆಗೆ ಬುರ್ಜ್ ಖಲೀಫಾ, ಫ್ಯೂಚರ್ ಮ್ಯೂಸಿಯಂ, ಶೇಖ್ ಜಾಯೆದ್ ಮಸೀದಿ ಮತ್ತಿತರ ಹೈಟೆಕ್ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇ ಇದೀಗ ತನ್ನ ಗುರುತಿಗೆ ಮತ್ತೊಂದು ಸಾಂಸ್ಕೃತಿಕ ಅಧ್ಯಾಯವನ್ನು ಸೇರಿಸಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುವ ವಿಶ್ವಾಸವಿದೆ. ಇದು ಯುಎಇಗೆ ಬರುವ ಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಜನರ ಸಂಪರ್ಕವೂ ಹೆಚ್ಚಾಗುತ್ತದೆ.ಇಡೀ ಭಾರತ ಮತ್ತು ಪ್ರಪಂಚದಾದ್ಯಂತ ವಾಸಿಸುವ ಲಕ್ಷಾಂತರ ಭಾರತೀಯರ ಪರವಾಗಿ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತುಯುಎಎ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.