ಬಳ್ಳಾರಿ:- ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ರಾಮಮಂದಿರ ಉದ್ಘಾಟನೆ ಮಾಡುತ್ತಿದೆ ಎಂದು ಹೇಳುವ ಮೂಲಕ ಉಗ್ರಪ್ಪ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಮನಂತೆ ಮಾತಿಗಾಗಿ ನಡೆಯುವವರು ಯಾರದರು ಇದ್ದರೆ ಅವರು ಕಾಂಗ್ರೇಸ್ ನವರು,ರಾಮನ ಮಾದರಿಯಲ್ಲಿ ಸಮಸಮಾಜ ವನ್ನು ನಿರ್ಮಾಣ ಮಾಡುವ ಕಾರ್ಯ ಕಾಂಗ್ರೇಸ್ ಮಾಡುತ್ತಿದೆ. ಕಾಂಗ್ರೇಸ್ ಅವರು ಸಹ ಹಿಂದುಗಳು, ಹಿಂದು ವಿರೋಧಿಗಳ್ಳ. ಆದರೆ ಬಿಜೆಪಿ ಅವರು ವಿರೋಧ ಪಕ್ಷ ಕಾಂಗ್ರೇಸ್ ನ್ನು ಹಿಂದು ವಿರೋಧಿ ಎಂದು ಬಿಂಬಿಸಲಾಗಿದೆ.
ರಾಮನಿಗೆ ಮೊದಲು ಪೂಜೆ ಮಾಡಿದ್ದು ನಮ್ಮ ಕಾಂಗ್ರೇಸ್. ಕಟ್ಟಡ ಪೂರ್ಣವಾಗದೇ, ಏಕಾಏಕಿಯಾಗಿ ಉದ್ಘಾಟನೆ ಮಾಡುವುದು ಸರಿಯಲ್ಲ. ಹಿಂದು ಸಂಪ್ರದಾಯದಂತೆ ಉದ್ಘಾಟನೆ ನಡೆಯುತ್ತಿಲ್ಲ ಎಂದು ಶಂಕರಾಚಾರ್ಯ ಮಠಾಧೀಶರೇ ಹೇಳಿದ್ದಾರೆ. ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲಿಕೆ ಬಿಜೆಪಿಯವರು ರಾಮಮಂದಿರ ಉದ್ಘಾಟನೆ ಮಾಡುತ್ತಿದ್ದಾರೆ.
https://ainlivenews.com/a-kannada-song-is-playing-in-ayodhya/
ರಾಮಮಂದಿರ ಕಾರ್ಯ ಇನ್ನು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಇಂದು ದೇಶದ ಜನರ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೇ ವಿರೋಧ ಪಕ್ಷದ ಮೇಲೆ ಕೇಸರು ಎರಚುವ ಕಾರ್ಯವನ್ನು ಮಾಡಿದೆ. ದೇಶದ ಅಭಿವೃದ್ದಿಗಿಂತ ಬಿಜೆಪಿ ಧಾರ್ಮಿಕವಾಗಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಕಾಂಗ್ರೇಸ್ ಅವರು ಸಹ ರಾಮನ ಆರಾಧಕರು ಎಂದು ಉಗ್ರಪ್ಪ ಹೇಳಿದ್ದಾರೆ.