ದೊಡ್ಡಬಳ್ಳಾಪುರ: ಬಾಗಲಕೋಟೆಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವದ ಅಂಗವಾಗಿ ನ.23 ರಂದು ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸ ಹಾಗೂ ಗುರು ಕುಟೀರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸಮುದಾಯದ ಶಿವರಾಜ್ ತಂಗಡಗಿ ಭಾಗವಹಿಸಲಿ ದ್ದಾರೆ. ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸುಮಾರು 2000 ಜನರು ಭಾಗವಹಿಸಲಿದ್ದಾರೆ ಎಂದು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎನ್. ರಾಮಕೃಷ್ಣ ತಿಳಿಸಿದರು.
ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಗುರುಪೀಠ ಉದ್ಘಾಟನೆ ಹಾಗೂ ಸಮಾವೇಶದ ಕುರಿತು ಜಿಲ್ಲೆಯ ಎಲ್ಲ ತಾಲೂಕುಗ ಳಲ್ಲಿ ಈಗಾಗಲೇ ಪ್ರಚಾರ ಮಾಡಲಾಗಿದೆ. ಬುಧವಾರ ಸಂಜೆ ಅವರವರ ಸ್ವಂತ ವಾಹನಗಳಲ್ಲಿ ಬಾಗಲಕೋಟೆ ಗೆ ಪ್ರಯಾಣ ಬೆಳೆಸಲಾಗುವುದು ಎಂದು ವಿವರಿಸಿದರು.
ಭೋವಿ ಅಭಿವೃದ್ಧಿ ನಿಗಮಕ್ಕೆ ಸಮಾಜದವರನ್ನೇ ಅಧ್ಯಕ್ಷ ರನ್ನಾಗಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಜೊತೆಗೆ ಕಲ್ಲು ಬಂಡೆ ಹೊಡೆಯಲು ಸಮಾಜದವರಿಗೆ ಅನುಮತಿ ಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸ್ವಾಮೀಜಿ ಯವರೇ ಸಿಎಂ ಮುಂದಿಡಲಿದ್ದಾರೆ ಎಂದರು. ಬಳಿಕ ತಾಲೂಕು ಕಚೇರಿ ವೃತ್ತಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಸಮಾವೇಶದ ಕುರಿತು ಪ್ರಚಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಧುರೆ ಹೋಬಳಿಯ ರಾ ಮಣ್ಣ ಸಾಸಲು ಹೋಬಳಿಯ ಶಿವಕುಮಾರ್, ಬೆಳವಂಗಲದ ಹೋಬಳಿಯ ನಾರಾಯಣಪ್ಪ ಕಸಬಾ ಹೋಬಳಿಯ ಸಿನಪ್ಪ, ಕೆ.ವೈ.ವೆಂಕಟರಮಣಪ್ಪ ಕೆ.ರವಿ, ರಾಜಣ್ಣ ಇತರರು ಇದ್ದರು.