ಹುಬ್ಬಳ್ಳಿ:ಶ್ರೀ ಶಾಂತಿನಾಥ ಹಿಂದಿ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಹಾಗೂ ವಿದ್ಯಾರ್ಥಿ ಸಂಸದ ಮಂತ್ರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಸ್ಥಳಿಯ ಶ್ರೀ ಜೈನ್ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದಿಂದ ಸಂಚಾಲಿತ ಶ್ರೀ ಶಾಂತಿನಾಥ ಹಿಂದಿ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಹಾಗೂ ವಿದ್ಯಾರ್ಥಿ ಸಂಸದ ಮಂತ್ರಿಗಳ ಪದಗ್ರಹಣ ಸಮಾರಂಭವು ಇಂದು ಏಕಕಾಲದಲ್ಲಿ ಜರುಗಿತು.
ಕಿವಿ ಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಿದ್ದೀರಾ!? ಹಾಗಿದ್ರೆ ಇಂದೇ ಬಿಟ್ಟು ಬಿಡಿ, ವೈದ್ಯರು ಹೇಳೋದು ಹೀಗೆ!
ಸಮಾರಂಭದ ಅಧ್ಯಕ್ಷತೆಯನ್ನು ಜೈನರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಭವರಲಾಲ ಜೈನ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟೆರಿಯನ್ ಬಾಲಕೃಷ್ಣ ಸರಾಫ ಆಗಮಿಸಿದ್ದರು. ಕುಮಾರಿ ಮಮತಾ, ಕುಮಾರಿ ಪಾಯಲ್ ಮತ್ತು ಸಂಗಡಿಗರಿಂದ ಪ್ರಾರ್ಥನೆ, ರೋಟೆರಿಯನ್ ಬಾಲಕೃಷ್ಣ ಸರಾಪರವರು ಇಂಟರ್ಯಾಕ್ಟ್ ಕ್ಲಬ್ನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ಕುಮಾರಿ ನೀಲಮ ರಾಥೋಡ ಇಂಟಾಕ್ಟ್ ಕ್ಲಬ್ನ ನೂತನ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜೊಗಾರಾಮ ಚೌಧರಿ, ಕಾರ್ಯದರ್ಶಿ ಪ್ರತಾಪಸಿಂಗ ರಾಠೋಡ, ಸಹ ಕಾರ್ಯದರ್ಶಿ ಮಂಜುಕುಮಾರಿ ಪ್ರಜಾಪತಿ, ಕೋಶಾಧ್ಯಕ್ಷ ಗೋವಿಂದ ರಾಮಲಾಲ್ ಬಿಕ್ಕೋಯಿ ಹಾಗೂ ಪುಜಾ ಕುಮಾರಿ ಪ್ರಜಾಪತ, ಸುರಜ ದೇವಾಸಿ, ವಲಾರಾಮ, ಭವರಲಾಲ ಸಿ. ಜೈನ ಅವರು ವಿದ್ಯಾರ್ಥಿ ಸಂಸದರಿಗೆ ಪ್ರಮಾಣ ವಚನ ಭೋಧಿಸಿದರು.
ಮೀತಕುಮಾರ ಖಂಡಲವಾಲ್ ಪ್ರಧಾನ ಸಚಿವ, ಉಪ ಪ್ರಧಾನ ಸಚಿವರಾಗಿ ಪೂಜಾ ರಾಜಪೂತ, ಶಿಕ್ಷಣ ಸಚಿವೆ ದೇವಿಸಿಂಗ ರಾಜ ಪೂರೋಹಿತ, ಕ್ರೀಡಾ ಸಚಿವ ದೇವಾರಾಮ ಚೌಧರಿ, ಹಣಕಾಸು ಸಚಿವೆ ಪಂಖು ಚೌಧರಿ, ಸಾಂಸ್ಕೃತಿಕ ಸಚಿವೆ ದಿವ್ಯಾ ರಾವಲ್, ಪ್ರಾರ್ಥನಾ ಸಚಿವ ಕುಲದೀಪಸಿಂಗ ರಾಜಪೂತ ಅಧಿಕಾರ ಸ್ವೀಕರಿಸಿದರು.
9ನೆ ತರಗತಿ ವಿದ್ಯಾರ್ಥಿನಿ ಮಂಜುಕುಮಾರಿ ಪ್ರಜಾಪತ ಸ್ವಾಗತಿಸಿದರು. ಪ್ರಧಾನ ಆಧ್ಯಾಪಕರಾದ ಶ್ರೀ ವಿಲಾಸ ಪುದಾಲೆಯವರು ಅತಿಥಿಗಳನ್ನು ಪರಿಚಯಿಸಿದರು ಹಾಗೂ ಹಿರಿಯ ಶಿಕ್ಷಕರಾದ ಶ್ರೀ ಎಸ್.ಎಮ್ ಜಡೆನ್ನವರ ವಂದಿಸಿದರು.
ರೋಟೆರಿಯನ್ ದಿನೇಶ ಶೆಟ್ಟಿ, ರೋಟೆರಿಯನ್ ಪ್ರವೀಣ ಚೆನ್ನಾಲಿ, ರೋಟೆರಿಯನ್ ಜಯಂತಿಲಾಲ ಗುಲೆಭಾ, ರೋಟೆರಿಯನ್ ಅಶ್ವಿನ ಸಂಘವಿ ಹಾಗೂ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.