ನ್ಯೂಯಾರ್ಕ್: ಮೊದಲೆರಡು ಪಂದ್ಯಗಳಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಬೌಲರ್ಗಳ ಸಾಹಸದಿಂದ ಗೆಲುವುಗಳನ್ನು ಸಾಧಿಸಿದ್ದ ಭಾರತಕ್ಕೆ, ಆತಿಥೇಯ ಅಮೆರಿಕ ಸವಾಲು ಎದುರಾಗಲಿದೆ. ಅಮೆರಿಕ ಎನ್ನುವುದಕ್ಕಿಂತ ಇದೊಂದು ರೀತಿ ‘ಮಿನಿ ಇಂಡಿಯಾ’ದ ಸವಾಲು ಎಂದೇ ಕರೆಯಬಹುದು. ಕಾರಣ, ಅಮೆರಿಕ ತಂಡದಲ್ಲಿ 8 ಭಾರತೀಯ ಮೂಲದ ಆಟಗಾರರಿದ್ದು, ಇದರಲ್ಲಿ 6 ಮಂದಿ ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ, ಅಧಿಕೃತವಾಗಿ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ.
ಅಲ್ಲದೇ ನ್ಯೂಯಾರ್ಕ್ನ ನಾಸೌ ಕ್ರೀಡಾಂಗಣದಲ್ಲಿ ತಂಡಕ್ಕಿದು ಕೊನೆಯ ಪಂದ್ಯವಾಗಿದ್ದು, ಯಾವುದೇ ಆಘಾತಕಾರಿ ಫಲಿತಾಂಶಕ್ಕೆ ದಾರಿ ಮಾಡಿಕೊಡದೆ, ಸುಲಭವಾಗಿ ಗೆದ್ದು ಮುನ್ನಡೆಯಲು ಟೀಂ ಇಂಡಿಯಾ ಕಾತರಿಸುತ್ತಿದೆ. ತಂಡದ ಬ್ಯಾಟಿಂಗ್ ಪಡೆಗೆ ಮತ್ತೊಮ್ಮೆ ಕಠಿಣ ಸವಾಲು ಎದುರಾಗಲಿದ್ದು,
ಮಲಗುವ ಮುನ್ನ ಒಂದು ಲೋಟ ಜಾಯಿಕಾಯಿ ಹಾಕಿದ ಹಾಲನ್ನು ಕುಡಿಯಿರಿ ಸಾಕು. ! ಆಮೇಲೆ ಚಮತ್ಕಾರ ನೋಡಿ
ಸೂಪರ್-8ಗೂ ಮುನ್ನ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಇನ್ನಷ್ಟೇ ದೊಡ್ಡ ಇನ್ನಿಂಗ್ಸ್ ಆಡಬೇಕಿದ್ದು, ಕಳಪೆ ಆಟಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿರುವ ಸೂರ್ಯಕುಮಾರ್ ಯಾದವ್ ಮೇಲೆ ಭಾರಿ ಒತ್ತಡವಿದೆ. ರಿಷಭ್ ಪಂತ್ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿ ಅರಿತು ಬ್ಯಾಟ್ ಮಾಡಬೇಕಾದ ಅನಿವಾರ್ಯತೆ ಇದೆ.
ದುಬೆಗೆ ಕೊಕ್?: ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ, ಫೀಲ್ಡಿಂಗ್ನಲ್ಲೂ ಹೀನಾಯ ಪ್ರದರ್ಶನ ನೀಡುತ್ತಿರುವ ಶಿವಂ ದುಬೆ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಹಾಕುವ ಸಾಧ್ಯತೆ ಇದೆ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಆಡಬಹುದು ಎನ್ನಲಾಗುತ್ತಿದೆ. ಇಲ್ಲವೇ ಯಶಸ್ವಿ ಜೈಸ್ವಾಲ್ಗೆ ಅವಕಾಶ ನೀಡಿ, ರೋಹಿತ್ ಜೊತೆ ಆರಂಭಿಕನನ್ನಾಗಿ ಆಡಿಸಬಹುದು. ಆಗ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು, ಸೂಪರ್-8ಗೂ ಮುನ್ನ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ಗೂ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ (ನಾಯಕ), ವಿರಾಟ್ ಕೊಹ್ಲಿ, ಪಂತ್, ಸೂರ್ಯ, ದುಬೆ/ಸ್ಯಾಮ್ಸನ್, ಹಾರ್ದಿಕ್, ಅಕ್ಷರ್, ಜಡೇಜಾ, ಬೂಮ್ರಾ, ಸಿರಾಜ್, ಅರ್ಶ್ದೀಪ್.
ಅಮೆರಿಕ: ಟೇಲರ್, ಮೋನಂಕ್ (ನಾಯಕ), ಗೌಸ್, ಜೋನ್ಸ್, ನಿತೀಶ್, ಆ್ಯಂಡರ್ಸನ್, ಹರ್ಮೀತ್, ಜಸ್ದೀಪ್, ನೋಸ್ತುಷ್, ಸೌರಭ್, ಅಲಿ ಖಾನ್.