ಯಾದಗಿರಿ:– ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳು ಅಟ್ಟಹಾಸ ಮೆರೆದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಜರುಗಿದೆ.
ಈ ಪುಂಡರು ರಾತ್ರಿ ಸಮಯದಲ್ಲಿ ಸಂಚರಿಸ್ತಿರುವ ವಾಹನ ತಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಲಾಂಗು, ಮಚ್ಚು ಗಳಿಂದ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಹಾಕಿದ್ದಾರೆ. ಕೆಂಭಾವಿ ಟು ನಗನೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಪುಡಿರೌಡಿಗಳು ಪುಂಡಾಟ ನಡೆಸಿದ್ದಾರೆ. ತಡರಾತ್ರಿ ಸಂಚರಿಸುವ ವಾಹನಗಳೇ ಖತರ್ನಾಕ್ ಗ್ಯಾಂಗ್ ನ ಟಾರ್ಗೆಟ್ ಆಗಿದ್ದು, ಈ ಬಗ್ಗೆ ಸ್ಥಳೀಯರಿಂದ ಕೆಂಭಾವಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳೀಯರು ಮಾಹಿತಿ ನೀಡಿದ್ರು ಪ್ರಕರಣ ದಾಖಲಿಸಲು ಕೆಂಭಾವಿ ಪೊಲೀಸರ ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.