ಬೆಂಗಳೂರು;- ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಜೋರು ಮಳೆಗೆ ನಗರದ ಅಂಡರ್ ಪಾಸ್ ನಲ್ಲಿ ಜಲಾವೃತವಾಗುದೆ. ಶಾಂಗ್ರಿಲ ಹೋಟೆಲ್ ಹಿಂದೆ ಇರುವ ಸಿಎಂ ನಿವಾಸ ಕೃಷ್ಣಾ ನಿವಾಸದ ಹತ್ತಿರ ಇರುವ ಅಂಡರ್ ಪಾಸ್ ಜಲಾವೃತವಾಗಿದೆ.
ಇನ್ನೂ ಮಳೆ ಬಂದು ಅಂಡರ್ ಪಾಸ್ ಗೆ ನೀರು ನಿಂತರು ಸಹ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ನೀರು ತೆರವಿಗೆ ಮುಂದಾಗಿಲ್ಲ. ಅಲ್ಲದೇ ಅಂಡರ್ ಪಾಸ್ ಬ್ಯಾರಿಕೆಡ್ ಕೂಡ ಹಾಕಿಲ್ಲ. ಬ್ಯಾರಿಕೆಡ್ ಇದ್ರು ಸಹ ಹೆಸರಿಗೆ ಮಾತ್ರ ಇಡಲಾಗಿದೆ. ಆದ್ರೆ ಜನರು ನೀರು ಇಲ್ಲಾ ಅಂತ ತಿಳಿದುಕೊಂಡು ಹಾಗೆ ಅಂಡರ್ ಪಾಸ್ ಗೆ ವಾಹನ ಸವಾರರು ಬರುತ್ತಿದ್ದಾರೆ.
ಅಂಡರ್ ಪಾಸ್ ಒಳಗೆ ವಾಹನಗಳು ಪರದಾಟ ನಡೆಸಿದ್ದು, 4 ಚಕ್ರದ ವಾಹನಗಳು ಪರದಾಟ ನಡೆಸಿವೆ. ಆದ್ರೆ 2 ಚೆಕ್ರ ವಾಹನಗಳು ಮಾತ್ರ ಒಳಗಡೆ ಬರ್ತಾನೆ ಇಲ್ಲ. ಇಲ್ಲಿ ಸರಿಯಾದ ನಿರ್ವಹಣೆ ಸಹ ಇಲ್ಲಾ. ಕರೆಂಟ್ ಆಗ್ಲಿ ಸಿಸಿ ಕ್ಯಾಮೆರ ಆಗ್ಲಿ ಯಾವುದು ಇಲ್ಲಿ ವರ್ಕ್ ಆಗಲ್ಲ. ಇದು ಸಿಎಂ ನಿವಾಸದ ಹಿಂದೆ ಇರುವ ಅಂಡರ್ ಪಾಸ್ ವ್ಯವಸ್ಥೆ. ಇಲ್ಲೇ ಹೀಗೆ ಆದ್ರೆ ನಗರದಲ್ಲಿ ಇರುವ ಉಳಿದ ಅಂಡರ್ ಪಾಸ್ ಗತಿ ಏನು? ಎನ್ನುವ ಪ್ರಶ್ನೆ ಎದ್ದಿದೆ.