ಹಾಸನ:- ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹಿಂದೆಂದಿಗಿಂತಲೂ ನಾವು ಒಗ್ಗಟ್ಟಾಗಿದ್ದೇವೆ, ಒಂದಾಗಿದ್ದೇವೆ. ನಮ್ಮ ನಾಡಿನ ಚಹರೆ ಏನು ಎಂದು ಗೊತ್ತಾಗಿರುವುದು ನಾಡಗೀತೆಯಿಂದ. ಭಾರತ ಒಂದು ಒಕ್ಕೂಟವಾಗಿದ್ದು ಒಂದು ಪವಾಡ. ನಮಗೆ ಕನ್ನಡ ಭಾಷೆ ಹಕ್ಕಾಗಿ ಸಿಕ್ಕಿದ್ದು ಭಾಷಾವಾರು ಪ್ರಾಂತ್ಯದಿಂದ. ಈಗ ದಿಶಾವನ್ನು ಭಾರತ ಮಾಡಲು ಎಲ್ಲಾ ಪ್ರಯತ್ನ ನಡೆಯುತ್ತಿದೆ. ಉತ್ತರ ಭಾರತದಲ್ಲಿ 700 ಲೋಕಸಭಾ ಕ್ಷೇತ್ರಗಳು ಆಗುತ್ತವೆ. ದಕ್ಷಿಣ ಭಾರತದಲ್ಲಿ ಕೇವಲ 117 ಕ್ಷೇತ್ರಗಳು ಮಾತ್ರ ಆಗುತ್ತವೆ ಎಂದಿದ್ದಾರೆ.
ದಿಶಾ ಭಾರತ ಅಂದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ ದಿಕ್ಕಿಲ್ಲದವರಾಗುತ್ತೇವೆ ನೆನಪಿಟ್ಟುಕೊಳ್ಳಿ. ಒಕ್ಕೂಟ ಕೊಟ್ಟ ಕನ್ನಡದ ಹಕ್ಕಿನ ಪತ್ರವನ್ನು ಜೋಪಾನ ಮಾಡಬೇಕು. ಈ ಸಂಸ್ಥಾನ ಅತ್ಯಂತ ದೊಡ್ಡ ಸಂಸ್ಥಾನ ಧೈರ್ಯವಾಗಿ ಹೇಳುತ್ತೇನೆ. ಈ ಕ್ಷೇತ್ರದಿಂದ ಒಂದೇ ಒಂದು ವಿನಂತಿ ಮಾಡುತ್ತೇನೆ. ಆ ಸತ್ಪುರುಷನ ಅಭಯ ಎನ್ನುವ ಹೃದಯದ ಕಕ್ಷೆ ಕನ್ನಡಕ್ಕೆ ಬೇಕಾಗಿದೆ. ಈಗ ಭಾಷೆಯಿಂದ ನಮಗೆ ರಾಜ್ಯವಿರಬಹುದು ಮುಂದೆ ಬದಲಾಗಬಹುದು ಎಂದರು.