ಬೆಂಗಳೂರು: ಬೆಂಗಳೂರಿನಲ್ಲಿ ಮ್ಯಾಂಗೋ ಹಾಗೂ ಹಲಸು ಸೀಸನ್ ಆರಂಭವಾಗಿದ್ದು.., ಎಲ್ಲಿ ನೋಡಿದರು ಬಗೆಬಗೆಯ ಮಾವಿನ ಹಣ್ಣನ್ನ ಜನರು ಸವಿಯುತ್ತಿದ್ದಾರೆ. ಇನ್ನೂ ಸಸ್ಯ ಕಾಶಿ ಲಾಲ್ಬಾಗ್ನಲ್ಲಿ ಮ್ಯಾಂಗೋ ಹಾಗೂ ಹಲಸು ಮೇಳ ಆರಂಭವಾಗಿದೆ. ಹಾಗಾದರೆ ಮಾವು ಹಾಗೂ ಹಲಸಿನ ಬೆಲೆ ಎಷ್ಟಿದೆ. ವ್ಯಾಪಾರ ಹೇಗೆ ನಡೆಯುತಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಹೌದು… ಮಾವು ಹಾಗೂ ಹಲಸು ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಯಿತು. ಒಂದು ಕಡೆ ಮಾವಿನ ಹಣ್ಣಿನ ಕಾರುಬಾರು ಆದರೆ ಮತ್ತೊಂದು ಕಡೆ ಹಲಸಿನ ಪರಿಮಳಕ್ಕೆ ಜನರು ಫಿದಾ ಆಗ್ತಾ ಇದ್ದಾರೆ. ಇನ್ನೂ…ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ವೆರೈಟಿ ಹಣ್ಣುಗಳು ಬರುತ್ತಿದ್ದು, ಬಾಯಲ್ಲಿ ನೀರೂರಿಸುವಂತಿದ್ದು.., ಹದಿನೆಂಟು ದಿನಗಳ ಕಾಲ ಲಾಲ್ಬಾಗ್ನಲ್ಲಿ ಮಾವು ಹಾಗೂ ಹಲಸು ಮೇಳವನ್ನ ಆಯೋಜಿಸಲಾಗಿದೆ.
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಹೌದು …ಸಸ್ಯಕಾಶಿ ಲಾಲ್ಬಾಗ್ ತುಂಬೆಲ್ಲಾ ಮಾವು ಹಲಸಿನ ಘಮ ಜನರ ಮೂಗಿಗೆ ನಾಟುತ್ತಿದ್ದು.., ಜೂನ್ 10ರವರೆಗೆ ಮಾವು ಹಾಗೂ ಹಲಸಿನ ಮೇಳ ಆಯೋಜನೆ ಮಾಡಲಾಗಿದ್ದು.., ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ನಾಗರಾಜು ಅವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಲಾಲ್ಬಾಗ್ ಜಂಟಿ ನಿರ್ದೇಶಕರಾಗಿರುವ ಜಗದೀಶ್ ಸೇರಿ ಹಕವರು ಭಾಗಿಯಾಗಿದ್ದರು.
ಈ ಬಾರಿ ಮೇಳಕ್ಕೆ ಬಾದಾಮಿ, ಮಲ್ಲಿಕಾ, ರಸಪುರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್ ಸೇರಿ ಬಗೆ ಬಗೆಯ ಮಾವುಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ.ಇನ್ನೂ..ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮ್ಯಾಂಗೋ ಮೇಳ ಆಯೋಜಿಸಲಾಗಿದ್ದು.., ಮೇಳದಲ್ಲಿ ಕಾರ್ಬೈಡ್ ರಹಿತವಾದ ಆರೋಗ್ಯಕರವಾದ ಮಾವನ್ನ ಮಾರಾಟ ಮಾಡಲಾಯಿತು.
ಹಾಗಾದರೆ ಮಾವಿನ ಹಣ್ಣುಗಳ ದರ ಎಷ್ಟಿದೆ ಅಂತ ನೋಡೋದಾದರೆ
- ಬಾದಾಮಿ: 130 ರೂಪಾಯಿ
- ರಸಪುರಿ: 100 ರೂಪಾಯಿ
- ಸಕ್ಕರೆ ಗುತ್ತಿ: 200ರೂಪಾಯಿ
- ತೋತಾಪುರಿ: 50 ರೂಪಾಯಿ
- ಮಲ್ಲಿಕಾ: 130 ರೂಪಾಯಿ
- ಇಮಾಮ್ ಪಸಂದ್:250ರೂಪಾಯಿ
- ಸೇಂದೂರ: 60ರೂಪಾಯಿ
- ಮಲ್ಗೋವಾ: 220 ರೂಪಾಯಿ
- ಬಂಗನಪಲ್ಲಿ: 80 ರೂಪಾಯಿ
ಇನ್ನೂ ಕೇವಲ ಮಾವು ಅಷ್ಟೇ ಅಲ್ಲದೇ ಮೇಳದಲ್ಲಿ ಹಲಸಿನ ಘಮ ಕೂಡ ಗ್ರಾಹಕರನ್ನ ಆಕರ್ಷಿಸುತ್ತಿತ್ತು. ಇನ್ನೂ.. ಈ ಬಾರಿ ಮೇಳದಲ್ಲಿ ಶಿವರಾತ್ರಿ, ಚಂದ್ರ, ಲಾಲ್ಬಾಗ್ ಮಧುರ, ರುದ್ರಾಕ್ಷಿ ಹಲಸು ಸೇರಿದಂತೆ ವಿವಿಧ ಹಲಸನ್ನ ಮಾರಾಟ ಮಾಡಲಾಯಿತು. ಜೂನ್ 10ರವರೆಗೆ ಮಾವು ಹಾಗೂ ಹಲಸು ಮೇಳ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿ ತಮ್ಮ ತೋಟದಲ್ಲಿ ಸಾವಯವ ಕೃಷಿಯಿಂದ ಬೆಳೆದ ಮಾವಿನ ಹಣ್ಣನ್ನು ಮಾರುತ್ತಿದ್ದರೆ ಮತ್ತೊಂದು ಕಡೆ ತಮ್ಮ ನೆಚ್ಚಿನ ಬಗೆಯ ಮಾವಿನ ಹಣ್ಣನ್ನು ತಿಂದು ಜನರು ಫುಲ್ ಖುಷ್ ಆದರೂ