ಬಳ್ಳಾರಿ: ಗಾಂಧಿನಗರ ಭರ್ಜರಿ ಕಾರ್ಯಾಚರಣೆ ನಡೆಸಿ ಕೇವಲ 48 ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ್ದಾರೆ. ಮದುವೆ ಕಾರ್ಡ್ ಕೊಡುವ ನೆಪದಲ್ಲಿ ಖದೀಮರು ವೃದೆಯಿಂದ ಚಿನ್ನಭಾರಣ ಕಳುವು ಮಾಡಿದ್ದರು. ನಗರದ ಬಗೀಚಾ ಹೋಟಲ್ ಹಿಂಬದಿಯ, ಶ್ರಿಹರಿ ನಿಲಯದಲ್ಲಿ ಒಬ್ಬರೇ ಇದ್ದ ಅಜ್ಜಿಯನ್ನು ಗಮನಿಸಿ ಕಳ್ಳರಿಂದ ದುಶ್ಕೃತ್ಯ ಎಸಗಲಾಗಿದ್ದು, ವೃದ್ದೆಗೆ ಚಾಕುತೋರಿಸಿ ಬೆದರಿಕೆ ಹಾಕಿ, ಬಂಗಾರವನ್ನು ಕದ್ದಿದ್ದ ಕಳ್ಳರು, ವೃದ್ದೆಯ ಮೈಮೇಲೆ ಇದ್ದ 48 ಗ್ರಾಮ್ ಚೈನ್, 90 ಗ್ರಾಮ್ ತೂಕದ 6 ಬಳೆಗಳು, 9 ಗ್ರಾಮ್ ತೂಕದ 3 ಉಂಗುರಗಳನ್ನು ಕದ್ದು ಎಸ್ಕೆಪ್ ಆದ ಕಳ್ಳರು,
ಒಟ್ಟು 7,35,000-ರೂ ಮೌಲ್ಯದ 147 ಗ್ರಾಮ್ ಬಂಗಾರದ ಸಾಮಾನುಗಳನ್ನು ಕದ್ದಿದ್ದರು. ಬಳ್ಳಾರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜೀತ್ ಭಂಡಾರು ಅವರ ಮಾರ್ಗದರ್ಶನದಲ್ಲಿ ಪಿಐ ಸಿದ್ದಾರಾಮೇಶ್ವರವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಕೇವಲ 48 ಗಂಟೆಗಳಲ್ಲಿ ಆರೋಪಿಗಳಾದ ಸೇಲ್ವರಾಜನ್ ರಾಕೇಶ್(43) ಮತ್ತು ಶ್ರೀಕಾಂತ್ (44) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯದಲ್ಲಿ ಪಾಲ್ಗೊಂಡು, ಪ್ರಕರಣವನ್ನು ಭೇದಿಸಿದ ಪೋಲೀಸ್ ಸಿಬ್ಬಂದಿಗೆ ಎಸ್ಪಿಯವರು ಪ್ರಶಂಸಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.