ಸಮಯಕ್ಕೆ ಸರಿಯಾಗಿ ಸರ್ಕಾರಿ ಸಾರಿಗೆ ಬಸ್ಸ ಬೀಡಲು ಅಗ್ರಹಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು. ನಗರದ ಕೆಲಗೇರಿ ಬಳಿಯ ಧಾರವಾಡ ಗೋವಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಹಾಗೂ ಸಚಿವರ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಮಕ್ಕಳ ಹೋರಾಟಕ್ಕೆ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಕೂಡಾ ಸಾಥ ನೀಡಿದರು. ಇನ್ನೂ ಪ್ರತಿಭಟನೆ ತಿವ್ರಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಬಂದ್ ಆಗಿತ್ತು.
ವಾರದ ಎರಡು ದಿನದಲ್ಲಿಮಾತ್ರ ಸಮಯಕ್ಕೆ ಸರಿಯಾಗಿ ಬಸ್ಸ ಬರುತ್ತೆ, ಉಳಿದ ದಿನ ಬಸ್ಸ ಬರದೆ ನಾವು ಒರದಾಟ ಮಾಡಬೇಕಾಗಿದೆ. ಸಮಯಕ್ಕೆ ಶಾಲೆಗೆ ತೆರಳಲುಆಗುತ್ತಿಲ್ಲ. ಜೊತೆಗೆ ಇದರಿಂದಾಗಿ ನಮ್ಮ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಹಾಗಾಗಿ ಈ ಕೂಡಲೇ ನಮ್ಮಗೆ ಸಾರಿಗೆ ಬಸ್ಸನಿಂದಾಗುತ್ತಿರುವ ತೊಂದರೆ ಆದಷ್ಟು ಬೇಗ ಸರಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಾವು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಹಾಗೂ ಸಾರಿಗೆ ಸಚಿವರುಗೆ ಎಚ್ಚರಿಕೆ ನೀಡಿದರು