ಬೆಂಗಳೂರಲ್ಲಿ ಮತ್ತೆ ಗುಂಡಿನ ಶಬ್ಧ ಕೇಳಿಸಿದ್ದು ಹಾಡುಹಗಲೇ ಜ್ಯೂವೆಲ್ಲರಿ ಶಾಪ್ʼಗೆ ನುಗ್ಗಿ ಶೂಟೌಟ್ ಮಾಡಿರುವ ಪ್ರಕರಣ ನಡೆದಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿರೋ ಘಟನೆಯಾಗಿದ್ದು ನಾಲ್ಕು ಜನ ಆರೋಪಿಗಳಿಂದ ನಡೆದಿರೋ ಕೃತ್ಯವಾಗಿದೆ. ಏಕಾಏಕಿ ಬಂದು ದರೋಡೆಗೆ ಮುಂದಾಗಿದ್ದ ಆರೋಪಿಗಳು ಈ ವೇಳೆ ಜ್ಯುವೆಲ್ಲರಿಯಲ್ಲಿದ್ದ ಇಬ್ಬರ ಮೇಲೆ ಫೈರ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಅಪೂರಾಮ್ ಹಾಗೂ ಅಂದರಾಮ್ ಎಂಬುವರ ಮೇಲೆ ಫೈರಿಂಗ್ ಮಾಡಲಾಗಿದ್ದು ಓರ್ವನ ಹೊಟ್ಟೆಗೆ ಹಾಗೂ ಮತ್ತೋರ್ವನ ಕಾಲಿಗೆ ತಗುಲಿರೋ ಗುಂಡು ಸದ್ಯ ಇಬ್ಬರೂ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ರಾಜ್ಯ ಡಿಜಿ ಐಜಿಪಿ ಅಲೋಕ್ ಮೋಹನ್ , ಕಮಿಷನರ್ ಬಿ.ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
11 ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ ಅವರ ಮೋಡೋಸ್ ನೋಡಿದ್ರೆ ರಾಬರಿಗೆ ಬಂದಹಾಗೆ ಇದೆ ಇಬ್ಬರ ಮೇಲೆ ಫೈರಿಂಗ್ ಮಾಡಿದ್ದಾರೆ ಸದ್ಯ ಗಾಯಾಳುಗಳು ಪ್ರಾಣಾಪಯದಿಂದ ಪಾರಾಗಿದ್ದಾರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತದೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಿದರು.