ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕಾದ ಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್ ಕುಮಾರ್ ಆರೋಗ್ಯ ಸುಧಾರಿಸಿದೆ. ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಕ್ಯಾನ್ಸರ್ ಫ್ರೀ ಆಗಿರುವ ಶಿವಣ್ಣ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಅಮೆರಿಕಾದಲ್ಲಿಯೇ ಇರುವ ಶಿವರಾಜ್ ಕುಮಾರ್ ಮನೆಯಿಂದ ಹೊರ ಬಂದು ಕೊಂಚ ರಿಲ್ಯಾಕ್ಸ್ ಆಗುತ್ತಿದ್ದಾರೆ.
ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದೆ. ಕ್ಯಾನ್ಸರ್ ಫ್ರೀ ಆದ ಬಳಿಕ ಶಿವಣ್ಣ ಇದೇ ಮೊದಲ ಬಾರಿಗೆ ಮನೆಯಿಂದ ಹೊರಗೆ ಬಂದು ಕುಟುಂಬದವರ ಜೊತೆ ಕೆಲ ಶಾಂಪಿಂಗ್ ಸೆಂಟರ್ ಗಳನ್ನು ಸುತ್ತಾಡಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಶಿವಣ್ಣ ಮನೆಯಿಂದ ಹೊರಗೆ ಬಂದಿರುವ ಫೋಟೋ ಲಭ್ಯವಾಗಿದೆ. ಅಮೆರಿಕಾದಲ್ಲಿ ಶಾಪಿಂಗ್ ಮಾಡಲು ಹೊರಗೆ ಬಂದಿರುವ ಶಿವಣ್ಣ ಆರಾಮಾಗಿ ವಾಕ್ ಮಾಡುತ್ತಿದ್ದಾರೆ. ಇದೇ ಜನವರಿ 26ರಂದು ಶಿವರಾಜ್ ಕುಮಾರ್ ಕುಟುಂಬ ಬೆಂಗಳೂರಿಗೆ ವಾಪಸ್ ಆಗಲಿದೆ.
ಅಮೆರಿಕದ ಪ್ರತಿಷ್ಠಿತ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಬಳಿಕ ಶಿವರಾಜ್ ಕುಮಾರ್ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಈ ಮೊದಲು ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ್ದ ಶಿವಣ್ಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರೋದಾಗಿ ಹೇಳಿದ್ದರು. ಜೊತೆಗೆ ಕೆಲ ದಿನಗಳಲ್ಲಿ ಅಭಿಮಾನಿಗಳು ಮುಂದೆ ಫುಲ್ ಎನರ್ಜಿಯಿಂದ ಕಂಬ್ಯಾಕ್ ಆಗೋದಾಗಿ ಹ್ಯಾಟ್ರಿಕ್ ಹೀರೋ ಭರವಸೆ ನೀಡಿದ್ದಾರೆ.