ಹಾಸನ: ನನಗಂತೂ ಅಸಮಾಧಾನವಿಲ್ಲ ನಾನು ಪಕ್ಷದ ಜವಬ್ದಾರಿ ಕೇಳಿ ಪಡೆದವನಲ್ಲ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕ ಸಿಟಿ ರವಿ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಧರ್ಮದ ವಿರುದ್ಧ ಧರ್ಮದ ಜಯ ಆಗಬೇಕು ಅಸತ್ಯದ ವಿರುದ್ಧ ಸತ್ಯದ ಜಯ ಆಗಬೇಕು.
ಸನಾತನ ಧರ್ಮವೇ ಭಗವಂತನ ಕಾಣದೋ ಎಂದು ಹೇಳಿದರು. ರಾಮನಿಗೆ ಮತ್ತು ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ಸಿ ಟಿ ರವಿ ಅವರಿಗಿಂತ ನಾನು ದೊಡ್ಡವನಾ? ಸ್ವರ್ಧೆಯೇ ಇಲ್ಲದಿದ್ದಾಗ ರೇಸಿನ ಪ್ರಶ್ನೆಯೇ ಇಲ್ಲ. ಇದೀಗಾ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
Kolar: ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ..? ಐಜಿಪಿ ರವಿಕಾಂತೇಗೌಡ ಹೇಳೋದೇನು?
ಪಕ್ಷ ವಿಸ್ತರಿಸೋ ಕೆಲಸ ಆಗಬೇಕು. ಪಕ್ಷ ಜವಬ್ದಾರಿ ಕೊಟ್ಟಾಗ ಏನಾದ್ರು ಮಾತನಾಡಿದ್ರೆ ತಪ್ಪು ಸಂದೇಶ ರವಾನೆ ಆಗುತ್ತೆ. ನಮ್ಮ ಪಕ್ಷ ಗಟ್ಟಿಯಾಗಬೇಕು ಅಂತಾ ನಾನು ಬಯಸುವನು. ಅದು ಯಾರು ಮೂಲಕ ಆದರೂ ಸಂತೋಷ ಎಂದರು. ಪಕ್ಷ ಕಾಲ ಕಾಲಕ್ಕೆ ಅನುಭವ ಇದ್ದವರಿಗೂ, ಇಲ್ಲದವರಿಗೂ ಸ್ಥಾನಮಾನ ಕೊಟ್ಟಿದೆ ಅದನ್ನ ಚರ್ಚೆ ವಿಷಯ ಮಾಡಲು ನಾನು ಬಯಸೋದಿಲ್ಲ ಎಂದು ಹೇಳಿದರು.