ಪುಷ್ಪ-2 ಇನ್ನೇನು ಮೂರು ದಿನದಲ್ಲಿ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಕೂಡ ಕುತೂಹಲದಿಂದ ಇದ್ದಾರೆ. ಸಿನಿಮಾ ರಿಲೀಸ್ಗೂ ಮೊದಲು ದೊಡ್ಡ ಮೊತ್ತದಲ್ಲಿ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಿಂದಿ ಸಿನಿಮಾ ಯಾಕೆ ಮಾಡಲಿಲ್ಲ ಎಂಬುದಕ್ಕೆ ಕಾರಣ ಬಿಚಿಟ್ಟಿದ್ದಾರೆ. ಹಿಂದಿ ಸಿನಿಮಾ ಮಾಡುವುದು ಒಂದು ದೊಡ್ಡ ವಿಚಾರ. ನಾವು ನಮ್ಮ ಇಡೀ ಬದುಕಿನಲ್ಲಿ ಅಬ್ಬಬ್ಬಾ ಎಂದರೆ ಒಂದು ಅಥವಾ ಎರಡು ಹಿಂದಿ ಸಿನಿಮಾಗಳನ್ನು ಮಾಡಬಹುದು.
Ganga Kalyana Scheme: ಕೃಷಿ ಜಮೀನಿಗೆ ಉಚಿತ ಬೋರ್ʼವೆಲ್ ಬೇಕೇ..? ಹಾಗಿದ್ರೆ ಹೀಗೆ ಅರ್ಜಿ ಸಲ್ಲಿಸಿ
ನನಗೆ ಹಿಂದಿ ಸಿನಿಮಾ ಮಾಡುವುದು ಎಂದರೆ ತುಂಬಾನೇ ದೂರದ ವಿಷಯ ಎನಿಸುತ್ತದೆ. ಆ ಒಂದು ಮನಸ್ಥಿತಿಯಲ್ಲಿ ನಾನು ಇಲ್ಲ. ಸದ್ಯ ನಾನು ‘ಪುಷ್ಪ’ ನಟನೆಗೆ ನ್ಯಾಷನಲ್ ಅವಾರ್ಡ್ ಅನ್ನು ಗೆದ್ದಿದ್ದೇನೆ. ಅದೇ ಸಿನಿಮಾಗೆ ಸೂಪರ್ ಹಿಟ್ ಆಲ್ಬಂ ಅನ್ನು ಕೂಡ ಕೊಟ್ಟಿದ್ದೇವೆ. ಇಂತಹ ವಿಷಯಗಳು ನಮಗೆ ವಿಶೇಷ ಎನಿಸುತ್ತವೆ. ಹಿಂದಿ ಸಿನಿಮಾದಲ್ಲಿ ನಟನೆ ಮಾಡಲು ನನಗೆ ಅಷ್ಟು ಆಸಕ್ತಿ ಇಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಇನ್ನು ಪುಷ್ಪ-2 ಬಿಡುಗಡೆಯಾದ ಮೇಲೆ ಯಾವ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತದೆ ಎಂದು ಕಾದು ನೋಡಬೇಕು.