‘ಸೀತಾರಾಮಂ’ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ಮೃಣಾಲ್ ಠಾಕೂರ್ ಸದ್ಯ ವಿಜಯ್ ದೇವರಕೊಂಡ ಜೊತೆಗಿನ ‘ಫ್ಯಾಮಿಲಿ ಸ್ಟಾರ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನನಗೂ ಇಬ್ಬರೂ ಮಕ್ಕಳು ಬೇಕು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ ನಟಿ, ನಾನಿನ್ನೂ ಎಂಗೇಜ್ ಆಗಿಲ್ಲ. ಆದರೆ ಸಂಬಂಧದಲ್ಲಿರುವವರು ಆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಇಬ್ಬರೂ ನಿಷ್ಠಾವಂತರಾಗಿರಬೇಕು. ಆಗ ಆ ಸಂಬಂಧ ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ.
ಸೆಲೆಬ್ರಿಟಿ ಆಗೋದು ತುಂಬಾ ಕಷ್ಟ. ಶೂಟಿಂಗ್ ಸಮಯದಲ್ಲಿ ಸದಾ ಫ್ಯಾಮಿಲಿಯಿಂದ ದೂರ ಇರಬೇಕಾಗುತ್ತದೆ. ನನಗೆ ಸಹಜ ಜೀವನ ನಡೆಸಲು ಇಷ್ಟ. ನನಗೆ ಇಬ್ಬರು ಮಕ್ಕಳು ಇರಬೇಕು. ಅವರೊಂದಿಗೆ ಊಟಕ್ಕೆ ಹೋದರೆ ಎಷ್ಟು ಚೆನ್ನಾಗಿರುತ್ತದೆ ಎಂದು ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ.
ದಿಲ್ ರಾಜು ನಿರ್ಮಾಣದ ಫ್ಯಾಮಿಲಿ ಸ್ಟಾರ್ ಸಿನಿಮಾ ಇದೇ ಏ.5ರಂದು ತೆರೆಗೆ ಬರ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಫ್ಯಾಮಿಲಿ ಸ್ಟಾರ್ ಚಿತ್ರ ವಿಜಯ್ ಹಾಗೂ ಮೃಣಾಲ್ ಇಬ್ಬರಿಗೂ ಬ್ರೇಕ್ ನೀಡುತ್ತಾ ಕಾದು ನೋಡಬೇಕಿದೆ.