ಮಂಡ್ಯ:+ ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅಕ್ಕನ ಗಂಡನಿಗೆ ಕಠಂಪೂರ್ತಿ ಕುಡಿಸಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಜರುಗಿದೆ.
45 ವರ್ಷದ ನಾಗೇಶ್ ಕೊಲೆಯಾದ ಆರೋಪಿ. ನಾಗೇಶ್ ನಿಂದ ಕೊಲೆ ನಡೆದಿದೆ. ಬೆಂಗಳೂರಿನಿಂದ ಕರೆಸಿ, ಕಂಠಪೂರ್ತಿ ಕುಡಿಸಿ ಕೊಲೆ ಮಾಡಿದ್ದಾನೆ
ಕೊಲೆ ಆರೋಪಿ ಹಾಗೂ ಕೊಲೆಯಾದ ನಾಗೇಶ್ ಇಬ್ಬರೂ ಕಳೆದ 20 ವರ್ಷಗಳಿಂದ ಬೆಂಗಳೂರಿನ ನಾಗಸಂದ್ರದಲ್ಲಿ ವಾಸವಾಗಿದ್ದರು. ಕೊಲೆಯಾದ ನಾಗೇಶ್ ಆಟೋ ಚಾಲಕನಾಗಿದ್ದು, ಕೊಲೆ ಆರೋಪಿ ನಾಗೇಶ್ ಪ್ಯಾಕರ್ಸ್ ಅಂಡ್ ಮೂವರ್ಸ್ ಕೆಲಸ ಮಾಡಿಕೊಂಡಿದ್ದ. ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದ ನಾಗೇಶ್ ಬೆಂಗಳೂರಿನಿಂದ ಮಂಡ್ಯಕ್ಕೆ ಕರೆತಂದು ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಬಳಿಕ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.