ಹುಬ್ಬಳ್ಳಿ,: ನಗರದ ಬೆಂಡಿಗೇರಿಯಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ್ದ 1635 ಗ್ರಾಂ ಗಾಂಜಾ ವನ್ನು ಬೆಂಡಿಗೇರಿ ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಅಂದಾಜು 40 ಸಾವಿರ ರೂ. ಮೌಲ್ಯದ ಗಾಂಜಾ ಇದಾಗಿದೆ. ಅಖಿಲೇಶ್ ಯರಮಸಾಳ, ಪ್ರಭು ಗೆಜ್ಜೆಹಳ್ಳಿ ಬಂಧಿತ ಆರೋಪಿಗಳು. ಇನ್ನು ಮನೆ ಪರಿಶೀಲನೆ ವೇಳೆ ಅಖಿಲೇಶ್ ಯರಮಸಾಳ ಬಳಿಯಿದ್ದ 1250 ಗ್ರಾಂ ಗಾಂಜಾ ಹಾಗೂ ಕಬ್ಬಿಣದ 4 ತಲ್ವಾರ್, 1ಕೊಡಲಿ ವಶಕ್ಕೆ ಪಡೆಯಲಾಗಿದೆ.
ಮತ್ತೋರ್ವ ಆರೋಪಿ ಪ್ರಭು ಗೆಜ್ಜಿಹಳ್ಳಿ ಬಳಿ 385 ಗ್ರಾಂ ಗಾಂಜಾಯಿದ್ದು ಜಪ್ತಿ ಮಾಡಲಾಗಿದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.