ದೇವನಹಳ್ಳಿ : ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಪ್ರಾಣಿಗಳ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. MHO192 ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಕೌಲಲಾಂಪುರರದಿಂದ ಬೆಂಗಳೂರಿಗೆ ಪ್ರಾಣಿಗಳನ್ನು ಬಾಕ್ಸ್ ನಲ್ಲಿಟ್ಟು ತಂದಿದ್ದರು. ಟ್ರಾಲಿ ಬ್ಯಾಗ್ ನಲ್ಲಿ ಅಡಗಿಸಿ 40 ಬಾಕ್ಸ್ ಗಳಲ್ಲಿ ವಿವಿಧ ಪ್ರಾಣಿಗಳ ರವಾನಿಸಲಾಗುತ್ತಿದ್ದು.
ಪ್ರಥಮ್ ಮೇಲೆ ದರ್ಶನ್ ಫ್ಯಾನ್ಸ್ ನಿಂದ ನಡೀತಾ ಹಲ್ಲೆ!? ಅನುಮಾನ ಮೂಡಿಸಿದ ಒಳ್ಳೆಹುಡುಗನ ಪೋಸ್ಟ್ !
ಏರ್ಪೋಟ್ ನಲ್ಲಿ ಪರಿಶೀಲನೆ ವೇಳೆ ಬಾಕ್ಸ್ ನಲ್ಲಿ ಪ್ರಾಣಿಗಳು ಪತ್ತೆಯಾಗಿವೆ. ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ, ಕೆಂಪು ಇಲಿ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳನ್ನು ರಕ್ಷಿಸಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನ ತಂದಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಈ ಸಂಬಂಧ ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.