ರಾಯಚೂರು : ಜಿಲ್ಲೆಯ ಲಿಂಗಸುಗೂರು ತಹಶೀಲ್ದಾರ್ ಕಚೇರಿಯಲ್ಲಿ ಅಕೌಂಟ್ನಲ್ಲಿ ಕೋಟ್ಯಂತರ ರೂ ವಂಚನೆಯಾಗಿದೆ. ಲಿಂಗಸುಗೂರು ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆಗಿದ್ದ ಯಲ್ಲಪ್ಪ ಎಂಬಾತನ ವಿರುದ್ದ ವಂಚನೆ ಆರೋಪ ಕೇಳಿ ಬಂದಿದೆ. ಲಿಂಗಸುಗೂರಿನ ಖಾಸಗಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಜೊತೆ ಶಾಮೀಲಾಗಿ ಸರ್ಕಾರಿ ಹಣವನ್ನು ತನ್ನ ಮಗ,ಮಗಳು, ಪತ್ನಿ ಹೆಸರಿಗೆ ಅಕ್ರಮ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬೀದರ್ನಲ್ಲಿ ಮತ್ತೊಂದು ದರೋಡೆ ; ಹಾಡಹಗಲೇ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ
ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಬೇಕಿದ್ದ ಹಣ ಹಾಗೂ ನೈಸರ್ಗಿಕ ವಿಕೋಪದ ಪರಿಹಾರದ ಹಣ ದುರ್ಬಳಕೆ ಮಾಡಲಾಗಿದೆ. ಪ್ರಮುಖ ಆರೋಪಿ ಯಲ್ಲಪ್ಪ ತನ್ನ ಮಗ ವಿಶಾಲ್ ಹೆಸರಿನ ವಿಶಾಲ್ ಡೆಕೋರೇಟರ್ಸ್ ಗೆ 1 ಕೋಟಿ 98 ಸಾವಿರ, ಮಗಳಾದ ದೀಪಾ ಹೆಸರಿನ ದೀಪಾ ಟೆಕ್ಸ್ ಟೈಲ್ಸ್ ಹೆಸರಿನ ಖಾತೆಗೆ 31 ಲಕ್ಷ, ಪತ್ನಿ ನಿರ್ಮಲಾ ಹೆಸರಿನ ನಿರ್ಮಲಾ ಡಿಜಿಟಲ್ಸ್ ಖಾತೆಗೆ 18 ಲಕ್ಷ ವರ್ಗಾವಣೆ ಮಾಲಾಗಿದೆ. ಆ ಬಳಿಕ ಸಂಶಯ ಬಾರದಂತೆ ಮೂಲ ಖಾತೆಯ ಹಣವನ್ನು ಕಾರ್ಯಾಲಯದ ಸೆನ್ಸಸ್ ಖಾತೆಗೆ ಜಮೆ ಮಾಡಲಾಗಿದೆ.
ಈ ಬಗ್ಗೆ ಲಿಂಗಸುಗೂರು ತಹಶೀಲ್ದಾರ್ ಶಂಶಾಲರು ದೂರು ನೀಡಿದ್ದು, ದೂರಿನನ್ವಯ ಲಿಂಗಸುಗೂರು ಠಾಣೆಯಲ್ಲಿ ಎಸ್ ಡಿಎ ಯಲ್ಲಪ್ಪ,ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.