ಚಿತ್ರದುರ್ಗ:- ಚಿತ್ರದುರ್ಗ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಖಾಸಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯದ ಆತಿಥ್ಯ ನೆನೆಯಬೇಕು: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ
ಇಂದು ನಗರದಲ್ಲಿ ಗಾರ್ಮೆಂಟ್ಸ್ಗಳ ಮೇಲೆ ದಾಳಿ ಮಾಡಿದರು. ಈ ವೇಳೆ ಒಟ್ಟು 15 ಮಂದಿ ಶಂಕಿತ ಬಾಂಗ್ಲಾ ನುಸುಳುಕೋರರು ಪೊಲೀಸರು ವಶಕ್ಕೆ ಪಡೆದವರು. ಇವರಲ್ಲಿ ಶೇಕ್ ಶೈಪುರ್ ರೆಹಮಾನ್, ಸುಮನ್ ಹುಸೇನ್ ಎಂಬವರು ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶದೊಳಗೆ ನುಸಳಿರುವುದು ಪಕ್ಕಾ ಆಗಿದೆ.
ವಶಕ್ಕೆ ಪಡೆದವರನ್ನು ಪೊಲೀಸರು ಚಿತ್ರದುರ್ಗದ ಕೋಟೆ, ಗ್ರಾಮಾಂತರ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ಮಾಡಲಾಗುತ್ತಿದೆ.