ಚಿತ್ರದುರ್ಗ:- ಜಿಲ್ಲಾ ಬಡಾಗಿ ಕಾರ್ಮಿಕರ ಸಂಘದಿಂದ ನಗರಸಭೆಗೆ ಮನೆ ಕಟ್ಟಿಸಿ ಕೊಡುವ ಉದ್ದೇಶಕ್ಕೆ ಕಳೆದ 15 ವರ್ಷಗಳ ಹಿಂದೆ ಬಡಗಿ ಕಾರ್ಮಿಕರ ಸಂಘದಿಂದ ಜಮೀನು ಬಿಟ್ಟುಕೊಟ್ಟಿದ್ದು, ಈ ವರೆಗೂ ಬಡ ಕಾರ್ಮಿಕರು ನೆತ್ತಿಯ ಮೇಲಿನ ಸೂರಿಗೆ ಅಲೆದಾಡುವ ಪರೀಸ್ಥತಿ ನಿರ್ಮಾಣವಾಗಿದೆ.
ಚಿತ್ರದುರ್ಗ ಬಡಗಿ ಕಾರ್ಮಿಕರು ಕಳೆದ 15 ವರ್ಷಗಳ ಹಿಂದೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು. ಅದರಂತೆ ಆಗಿನ ಡಿಸಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಬಡಗಿ ಸಂಘದ 10 ಎಕರೆ ಜಾಗೆಯನ್ನು ನಗರಸಭೆಗೆ ಬಿಟ್ಟು ಕೊಡುವಂತೆ ಹೇಳಿದ್ರು. ಅದರಂತೆ ಸೂಕ್ತ ದಾಖಲಾತಿಯನ್ನು ಒದಗಿಸಿ ಬಡಗಿ ಸಂಘದಿಂದ ಜಾಗೆ ಹಸ್ತಾಂತರ ಮಾಡಲಾಗಿದೆ. ಅದರಲ್ಲಿ 418 ಜನ ಫಲಾನುಬವಿಗಳ ಹೆಸರನ್ನೂ ಕೂಡ ಕೊಟ್ಟಿದ್ದೇವೆ. ಆದ್ರೆ ನಮಗೆ ಕಳೆದ 15 ವರ್ಷಗಳಿಂದ ಮನೆ ಕಟ್ಟಿಸಿಕೊಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ನಮಗೆ ನಗರಸಭೆ ಮನೆ ಕಟ್ಟಿ ಕೊಡಬೇಕು ಅಂತಾ ಆಗ್ರಹಿಸಿದ್ರು. ಇಲ್ಲವಾದ್ರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ರು.