ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ʼಗೆ ಮತ್ತೊಂದು ಸಂಕಷ್ಟ ಶುರುವಾಗಿದ್ದು ಸಿಬಿಐ ತನಿಖೆ ನಂತರ ಮತ್ತೊಂದು ತನಿಖೆಗೆ ಆದೇಶ ನೀಡಲಾಗಿದೆ ಎನ್ನಲಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಕೇಸ್ ತನಿಖೆಗೆ ಆದೇಶ ಹೊರಡಿಸಿದ ಸರ್ಕಾರ ಆ ನಂತರ ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ ಸಿಬಿಐ ಅನುಮತಿ ಹಿಂಪಡೆದ ಹಿನ್ನಲೆ ತನಿಖೆ ಹೊಣೆ ಲೋಕಾಯುಕ್ತಕ್ಕೆ ನೀಡಿದೆ.
ರಾಮಮಂದಿರ ವಿಚಾರಕ್ಕೆ ಬಿಜೆಪಿ – ಕಾಂಗ್ರೆಸ್ ಮಧ್ಯ ಜಟಾಪಟಿ: ಸಿಎಂಗೆ ಆಹ್ವಾನವಿಲ್ಲದಿದ್ದಕ್ಕೆ ಆಕ್ರೋಶ!
ಡಿ.22 ರಂದು ಅಧಿಕೃತವಾಗಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ಗೆ ಅವರಿಗೆ ಸೂಚನೆ 2020ರಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್ ನಂಬರ್ 10(A) ವರ್ಗಾವಣೆ ಸರ್ಕಾರದ ಆದೇಶದಂತೆ ತನಿಖೆ ನಡೆಸಲು ತಂಡ ರಚಿಸಲಿರುವ ಲೋಕಾ ಡಿಜಿಪಿ ಹೊಸದಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಿರುವ ಲೋಕಾ ಪೊಲೀಸರು
ಕ್ಯಾಬಿನೆಟ್ ಆದೇಶದಂತೆ ರಾಜ್ಯದ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶ ಇಡಿ ಬರೆದಿದ್ದ ಪತ್ರದ ಆಧರಿಸಿ ಆದೇಶ ಮಾಡಿರುವ ರಾಜ್ಯ ಗೃಹ ಇಲಾಖೆ ಸಿಬಿಐನಿಂದ ಮಾಹಿತಿ ಪಡೆದು ತನಿಖೆ ಮುಂದುವರೆಸಲಿರುವ ಲೋಕಾ ಪೊಲೀಸರು
ತನಿಖೆಗೆ ಆದೇಶ ಸಂಬಂಧ ಜ.5 ರಂದು ಹೈಕೋರ್ಟ್ಗೆ ಮಾಹಿತಿ ನೀಡಲಿರುವ ಸರ್ಕಾರ ಕ್ಯಾಬಿನೆಟ್ ಆದೇಶ ಪ್ರಶ್ನಿಸಿ ಯತ್ನಾಳ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಬರಲಿದೆ ರಾಜ್ಯ ಸರ್ಕಾರ ಮಾಹಿತಿ ನೀಡಿದ ನಂತರ ಸಿಬಿಐ ನಡೆ ಬಗ್ಗೆ ಮೂಡಿದೆ ಕುತೂಹಲ
ಅನುಮತಿ ಹಿಂಪಡೆದು ಕ್ಯಾಬಿನೆಟ್ ಆದೇಶ ಮಾಡಿದ ನಂತರವೂ ತನಿಖೆ ಮುಂದುವರೆಸಿರುವ ಸಿಬಿಐ ಒಂದೇ ಅಪರಾಧ ಸಂಬಂಧ ಎರಡು ತನಿಖಾ ಸಂಸ್ಥೆಯಲ್ಲಿ ತನಿಖೆ ನಡೆಯಲಿದೆ ಆದರೆ ಈ ಸಂಬಂಧ ಹೈಕೋರ್ಟ್ ಯಾವ ಆದೇಶ ಮಾಡುತ್ತೆ ಅನ್ನೋದು ಕುತೂಹಲ ಮೂಡಿದೆ.