ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್ ಈಗ ಮೇಜರ್ ಟರ್ನ್ ಪಡೆದಿದೆ.. ಇವತ್ತು ಮಾಜಿ ಸಚಿವ ನಾಗೇಂದ್ರ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ವಿಚಾರಣೆಗೆ ಹಾಜರಾಗಿದ್ದಾರೆ.. ಮತ್ತೊಂದ್ಕಡೆ ನಿಗಮದ ಎಮ್ ಡಿಯ ವಿಡಿಯೋ ಒಂದು ಹೊರ ಬಿದ್ದಿದೆ.. ವಿಡಿಯೋ ಮತ್ತು ಆಡಿಯೋ ಮೂಲಕ ಸ್ಫೋಟಕ ವಿಷ್ಯಗಳು ಬಯಲಿಗೆ ಬಂದಿವೆ..
ಹೌದು.. ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.. ನಿಗಮ್ ಎಮ್ ಡಿ ಹಾಗೂ ಕೇಸ್ ನ 7ನೇ ಆರೋಪಿ ಪದ್ಮನಾಭ್ ಹಾಗೂ 8ನೇ ಆರೋಪಿ ಪರುಷರಾಮ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮತ್ತು ವಿಡಿಯೋ ಹೊರ ಬಿದ್ದಿದೆ.. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿರೋ ಇಬ್ಬರೂ ಅಕ್ರಮವಾಗಿ ವರ್ಗಾವಣೆ ಮಾಡಿರೋ ಹಣದ ಬಗ್ಗೆ ಹಾಗೂ ಅದನ್ನ ವಾಪಸ್ ಹಾಕಿಸಿಕೊಳ್ಳೋ ಬಗ್ಗೆ ಸಂಭಾಷಣೆ ನಡೆಸಿದ್ದಾರೆ.. ಈ ವೇಳೆ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹೆಸ್ರೂ ಪ್ರಸ್ತಾಪ ಆಗಿದ್ದು, ಅವ್ರಿಗೆ ಹಗರಣದ ಬಗ್ಗೆ ಹೇಳ್ಬೇಕೋ ಬೇಡ್ವೋ ಅನ್ನೋ ಚರ್ಚೆ ನಡೆದಿದೆ..
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಸರ್ಕಾರಿ ನೌಕರರು : ಪ್ರಮುಖ ಬೇಡಿಕೆಗಳೇನು?
ಅಂದ್ಹಾಗೆ ಈ ಎಲ್ಲಾ ಮೀಟಿಂಗ್ ಆಗಿರೋದು ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳೋ ಮೂರು ದಿನದ ಮುಂಚೆ.. ಅಂದ್ರೆ 24ನೇ ತಾರೀಖು ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.. ಈ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ಎಸ್ಐಟಿ ಟೀಂ ಪರುಷರಾಮ್ ರ ಮೊಬೈಲ್ ಅನ್ನ ಮತ್ತೊಮ್ಮೆ ಪರಿಶೀಲನೆ ಮಾಡೋಕೆ ಮುಂದಾಗಿದ್ದಾರೆ.. ಈ ನಡುವೆ ಇವತ್ತು ಸಚಿವ ನಾಗೇಂದ್ರ ಇವತ್ತು ವಿಚಾರಣೆಗೆ ಹಾಜರಾಗಿದ್ದಾರೆ.. ಬೆಳಗ್ಗೆ 11ಗಂಟೆ ಸುಮಾರಿಗೆ ನಾಗೇಂದ್ರ ವಿಚಾರಣೆಗೆ ಹಾಜರಾಗಿದ್ದು ಹಲವು ಗಂಟೆಗಳ ಕಾಲ ಎಸ್ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.. ವಿಚಾರಣೆ ವೇಳೆ ನಾಗೇಂದ್ರ ಕಡೆಯಿಂದ ಯಾವೆಲ್ಲಾ ಪ್ರಶ್ನೆಗಳಿಗೆ ಉತ್ತರ ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿರುವುದು ಯಾವಾಗ ನಿಮ್ಮಗಮನಕ್ಕೆ ಬಂತು? ಶಾಂಗ್ರೀಲಾ ಹೋಟೆಲ್ ನಲ್ಲಿ ನಡೆದ ಮೀಟಿಂಗ್ ಏನು? ಆ ಮೀಟಿಂಗ್ ನಲ್ಲಿ ಯಾರ್ಯಾರು ಭಾಗಿಯಾಗಿದ್ರು ನೆಕ್ಕಂಟಿ ನಾಗರಾಜ್ ನಿಮ್ಮ ಬಳಿ ಹಣದ ವಿಚಾರ ಮಾತನಾಡಿದ್ರಾ ಎಂಡಿ ಪದ್ಮನಾಭ್ ಗೆ ನೀವು ಏನ್ ಸೂಚನೆ ನೀಡಿದ್ರಿ?ವಾಲ್ಮೀಕಿ ನಿಗಮದ ಅಕೌಂಟ್ ನಿಂದ ಬೇನಾಮಿ ಅಕೌಂಟ್ ಗಳಿಗೆ ಹಣ ವರ್ಗಾಣೆ ಆಗಿದ್ದನ್ನು ನಿಮ್ಮಗಮನಕ್ಕೆ ತರಲಾಗಿತ್ತಾ? ಹೀಗೆ ಹಲವು ಪ್ರಶ್ನೆಗಳನ್ನ ನಾಗೇಂದ್ರಗೆ ಕೇಳಲಾಗಿದೆ..
ಇನ್ನು ಶಾಸಕ ಬಸವನಗೌಡ ದದ್ದಲ್ ಕೂಡ ಇಂದು ವಿಚಾರಣೆಗೆ ಹಾಜರಾಗಿದ್ರು…ಎಸ್ ಟಿ ನಿಗಮದ ಅಧ್ಯಕ್ಷರಾಗಿರೋ ದದ್ದಲ್ ಸಹಾಯಕ ಪಂಪಣ್ಣ 25 ಲಕ್ಷ ನೀಡಿರುವುದಾಗಿ ಸತ್ಯನಾರಾಯಣ ವರ್ಮ ಹೇಳಿಕೆ ನೀಡಿದ್ರು. ಸಂಬಂಧ ದದ್ದಲ್ ಅವರನ್ನು ಪ್ರಶ್ನೆ ಮಾಡಿರುವ ಎಸೈಟಿ ಅಧಿಕಾರಿಗಳು ಈ ಅಕ್ರಮದ ಬಗ್ಗೆ ನಿಮಗೆ ಏನೆಲ್ಲಾ ಗೊತ್ತಿದೆ, ವಿಷಯ ನಿಮಗೆ ಗೊತ್ತಿತ್ತಾ. ನಿಮ್ಮ ಸಹಾಯಕನಿಗೆ ಹಣ ತಲುಪಿರುವ ಬಗ್ಗೆ ನಿಮಗೆ ಮಾಹಿತಿ ಇತ್ತಾ. ನಿಮಗೆ ಅಕ್ರಮದ ಬಗ್ಗೆ ಯಾವಾಗ ಮಾಹಿತಿ ತಿಳಿಯಿತು ಅನ್ನೋ ಪ್ರಶ್ನೇಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಜೈಲು ಸೇರಿದ್ದ ಎ7 ಆರೋಪಿ ನಿಗಮದ ಎಂಡಿ ಜೆಜೆ ಪದ್ಮನಾಭ, ಅಕೌಂಟೆಂಟ್ ಪರಶುರಾಮ್ ಹಾಗು ಮಾಜಿ ಸಚಿವ ನಾಗೇಂದ್ರನ ಆಪ್ತ ನೆಕ್ಕಂಟಿ ನಾಗರಾಜ್ ನನ್ನು ಎಸೈಟಿ ಬಾಡಿ ವಾರಂಟ್ ಮೇಲೆ ಕೋರ್ಟ್ ಮೂಲಕ ನೆನ್ನೆ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳನ್ನು ಜುಲೈ 12 ರವರೆಗೆ ಎಸ್ಐಟಿ ತಮ್ಮ ವಶಕ್ಕೆ ಪಡೆದಿದೆ. ಎಸೈಟಿ ಇಂದು ಮಾಜಿ ಸಚಿವ ನಾಗೇಂದ್ರ, ಬಸವನಗೌಡ ದದ್ದಲ್ ಹಾಗು ಪದ್ಮನಾಭ್, ಪರುಶುರಾಮ್ ನೆಕ್ಕಂಟಿ ನಾಗರಾಜ್ ರನ್ನ ಮುಖಾಮುಕಿ ಮಾಡಿಸಿ ವಿಚಾರಣೆ ಮಾಡಿದ್ದಾರೆ ಎನ್ನಾಲಾಗಿದೆ…
ಸದ್ಯ ಕೇಸ್ ನಲ್ಲಿ ಇಬ್ಬರೂ ಕಾಂಗ್ರೆಸ್ ನಾಯಕರ ಹೆಸ್ರು ಜೋರಾಗಿಯೇ ಕೇಳಿ ಬರ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.