ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ಸೈಟ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ದೋಸ್ತಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ನಡುವೆ ಕೇಂದ್ರ ಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರಿಗೆ ಅಕ್ರಮ ಗಣಿಗಾರಿಗೆ ಅನುಮತಿ ನೀಡಿರುವ ಸಂಕಷ್ಟಗಳು ಎದುರಾಗಿದೆ.
ಡಿಟೆಕ್ಟಿವ್ ಏಜೆನ್ಸಿಗಳಿಗೆ ಅನಧಿಕೃತವಾಗಿ ಸಿಡಿಆರ್ ನೀಡ್ತಿದ್ದ ಪೊಲೀಸ್ ಸಿಬ್ಬಂದಿ ಅರೆಸ್ಟ್!
ಕೇಂದ್ರ ಮಂತ್ರಿ ಕುಮಾರಸ್ವಾಮಿ 12 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 550 ಎಕರೆಗಳಷ್ಟು ಅಕ್ರಮ ಗಣಿಗಾರಿಗೆ ಕಾನೂನು ಬಾಹಿರವಾಗಿ ಅವಕಾಶ ನೀಡಿದ್ದರು. ಮತ್ತು ಇದಕ್ಕೆ ಸಾಕ್ಷಿಎಂಬಂತೆ ಅನುಮತಿಗೆ ಕುಮಾರಸ್ವಾಮಿಯವರೇ ಸಹಿ ಮಾಡಿದ್ದಾರೆ ಎಂದು FSL ವರದಿಯಿಂದ ಸಾಬೀತಾಗಿತ್ತು. ಈ ಪ್ರಕರಣ ನಡೆದು 12 ವರ್ಷಗಳಾದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹೆಚ್ಡಿಕೆ ವಿರುದ್ದ ಕ್ರಮಕ್ಕೆ ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.